Published On: Sat, Jan 11th, 2020

ವಿಮಾನ ಪತನಕ್ಕೆ ತನ್ನ ಸೇನೆಯ ತಪ್ಪು ಗ್ರಹಿಕೆಯೇ ಕಾರಣ…!

ತೆಹ್ರಾನ್: ಸುಮಾರು 176 ಮಂದಿ ಪ್ರಯಾಣಿಕರು ಹಾಗು ಸಿಬ್ಬಂದಿಯನ್ನು ಹೊತ್ತು ಸಾಗುತ್ತಿದ್ದ ಬೋಯಿಂಗ್ 737 ಎಂಬ ಉಕ್ರೇನ್ ವಿಮಾನ ವೊಂದು ಟೆಹ್ರಾನ್ ನಲ್ಲಿ ಪತನವಾಗಿತ್ತು. ಇರಾನ್ ನ ರಾಜಧಾನಿ ಟೆಹ್ರಾನ್ ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಬೆಳಗ್ಗೆ ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ವಿಮಾನನಿಲ್ದಾಣದಲ್ಲೇ ಪತನಗೊಂಡಿತ್ತು.ಇದರ ಪರಿಣಾಮ ವಿಮಾನದಲ್ಲಿದ್ದವರೆಲ್ಲ ದಾರುಣವಾಗಿ ಸಾವನ್ನಪ್ಪಿದ್ದರು.

170919-iran-rouhani-mn-0946_1d85ada951b79c3a433778a0460750f1.fit-760w

ಆರಂಭದಲ್ಲಿ ಈ ಘಟನೆಗೆ ತಾಂತ್ರಿಕ ದೋಷವೆ ಕಾರಣ ಎಂದು ಹೇಳಲಾಗುತ್ತಿತ್ತು. ಆದರೆ ಇದೇ ವೇಳೆ ಅಮೆರಿಕಾ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸಿದ್ದು, ಕೆಲ ಅನುಮಾನಗಳಿಗೆ ದಾರಿಮಾಡಿಕೋಟ್ಟಿತ್ತು.ಅಮೆರಿಕಾ ಕೂಡ ಇರಾನ್ ಮೇಲೆ ಆರೋಪ ಮಾಡಿತ್ತು. ತಪ್ಪಾದ ಗ್ರಹಿಕೆಯಿಂದಾಗಿ ಇರಾನ್ ವಿಮಾನವನ್ನು ಹೊಡೆದುರುಳಿಸಿದೆ ಎಂದು ಹೇಳಿದ್ದರು. ಆದರೆ, ಇದನ್ನು ಇರಾನ್ ಒಪ್ಪಿಕೊಂಡಿರಲಿಲ್ಲ. ಆದರೆ ಇದೀಗ ರೆವಲ್ಯೂಷನರಿ ಗಾರ್ಡ್​ಗಳಿದ್ದ ಮಿಲಿಟರಿ ಪ್ರದೇಶಕ್ಕೆ ಸಮೀಪದಲ್ಲಿ ವಿಮಾನ ಹಾದು ಹೋಯಿತು. ಹೀಗಾಗಿ ತಪ್ಪಾಗಿ ಭಾವಿಸಿ, ವಿಮಾನವನ್ನ ಹೊಡೆದುರುಳಿಸಲಾಯ್ತು, ಇದು ಉದ್ದೇಶಪೂರ್ವಕವಲ್ಲ ಎಂದು ಇರಾನ್ ಹೇಳಿದೆ. ಹಾಗು ಈ ದುರಂತಕ್ಕೆ ಕಾರಣರಾದವರನ್ನ ಸೇನಾ ವ್ಯಾಪ್ತಿಯ ನ್ಯಾಯಾಂಗ ಇಲಾಖೆಗೆ ಒಪ್ಪಿಸಲಾಗುತ್ತೆ. ಅವರೇ ಈ ಕೃತ್ಯಕ್ಕೆ ಜವಾಬ್ದಾರರಾಗಿರುತ್ತಾರೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

b7c25bb6c2518594d99506ae5862ab52v1_max_755x425_b3535db83dc50e27c1bb1392364c95a2

ಇರಾನ್ ವಿದೇಶಾಂಗ ಸಚಿವ ಜಾವೇಸ್​​ ಝರೀಫ್​”ಅಮೆರಿಕಾದ ಸಾಹಸದಿಂದ ಉಂಟಾದ ಸಂಕಷ್ಟದ ಸಮಯದಲ್ಲೇ ಮಾನವ ತಪ್ಪೊಂದು ಈ ದುರಂತಕ್ಕೆ ಎಡೆ ಮಾಡಿಕೊಟ್ಟಿದೆ. ಇದಕ್ಕೆ ನಾವು ವಿಷಾದಿಸುತ್ತೇವೆ, ಕ್ಷಮೆ ಕೋರುತ್ತೇವೆ. ದುರಂತದಲ್ಲಿ ಮಡಿದವರ ಕುಟುಂಬಸ್ಥರಿಗೆ ನಮ್ಮ ಸಂತಾಪ” ಎಂದು ಟ್ವಿಟರ್​ನಲ್ಲಿ ಹೇಳಿದ್ದಾರೆ. ಹಾಗು ಇರಾನ್ ಅಧ್ಯಕ್ಷ ಹಸನ್ ರೊಹಾನಿಯವರು “ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್, ಇಂತಹ ಪ್ರಮಾದಕರ ತಪ್ಪನ್ನು ತೀವ್ರವಾಗಿ ವಿಷಾದಿಸುತ್ತದೆ. ಘಟನೆಯಲ್ಲಿ ತಮ್ಮ ಕುಟುಂಬಸ್ಥರನ್ನು ಕಳೆದುಕೊಂಡವರಿಗೆ ತೀವ್ರ ಸಂತಾಪವನ್ನು ಸೂಚಿಸುತ್ತೇನೆ. ಎಂದು ಟ್ವಿಟರ್​ನಲ್ಲಿ ತಿಳಿಸಿದ್ದಾರೆ .ಆದರೆ ಇರಾನ್ ನ ಈ ಹ್ಯೇಯ ಕೃತ್ಯಕ್ಕೆ ಬಲಿಯಾದವರು ಮಾತ್ರ ಏನು ಅರಿಯದ 176 ಮಂದಿ ಪ್ರಯಾಣಿಕರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter