Published On: Thu, Apr 30th, 2020

ಕುವೈಟ್ ಸಾರ್ವಜನಿಕ ಕ್ಷಮಾದಾನ: ಇಂಡಿಯನ್ ಸೋಶಿಯಲ್ ಫೋರಂ ವತಿಯಿಂದ ಅಹನಿರ್ಶಿ ಸೇವೆ    

ಕುವೈಟ್: ಇಂಡಿಯನ್  ಸೋಶಿಯಲ್ ಫೋರಮ್ ಕುವೈಟ್ ತನ್ನ ಅನ್ನದಾಸೋಹ ಗಾಗಿ ಮತ್ತೊಮ್ಮೆ ಸುದ್ದಿಯಾಗಿದ . ಕುವೈಟ್  ಸರಕಾರ  ಘೋಷಿಸಿದ ಸಾರ್ವಜನಿಕ ಕ್ಷಮಾದಾನವನ್ನು  ಜನರಡೆಗೆ ತಲುಪಿಸುವಲ್ಲಿ  ಇಂಡಿಯನ್ ಸೋಶಿಯಲ್ ಫಾರಮ್  ವಹಿಸಿದಪಾತ್ರವು  ವ್ಯಾಪಕ  ಪ್ರಶಂಸೆಗೆ  ಪಾತ್ರವಾಗಿದೆ.  ಭಾರತೀಯ ಮೂಲದ  ಸುಮಾರು 750 ಪಾಸ್ ಪೊರ್ಟ್ ರಹಿತ  ಮತ್ತು 1000ಕಿಂತಲೂ ಹೆಚ್ಚು  ಪಾಸ್ ಪೋರ್ಟ್ ಹೊಂದಿದ ಅನಾದಿಕೃತ ನಿವಾಸಿಗಳು ಐಎಸ್ಎಫ್ ಸಹಾಯವಾಣಿಯಂದ  ಪ್ರಯೋಜನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

3

ಕುವೈಟ್ ಸರಕಾರ, ಕುವೈಟಿನಲ್ಲಿ  ನೆಲೆಸಿರುವ  ಅನಾದಿಕೃತ  ನಿವಾಸಿಗಳಿಗ ಕ್ಷಮಾದಾನ  ಘೋಷಿಸಿದ  ಬೆನ್ನಿಗೆ ಕಾರ್ಯಗತಗೊಂಡ  ಇಂಡಿಯನ್  ಸೋಷಿಯಲ್ ಫೋರಮ್ ಕುವೈಟ್ ಕ್ಷಮಾದಾನ  ಪ್ರಯೋಜನ  ಇಚ್ಚಿಸುವ ಭಾರತೀಯರಿಗಾಗಿ  ಸಹಾಯವಾಣಿ ಆರಂಭಿಸಿತು.4

ಕನ್ನಡ, ತುಳು, ಬ್ಯಾರಿ,  ಮಲಯಾಳಂ, ತಮಿಳ್, ಹಿಂದಿ  ಇಂಗ್ಲಿಷ್,ಅರೇಬಿಕ್ ಮುಂತಾದ ಭಾಷೆಗಳಲ್ಲಿ ಸಹಾಯವಾಣಿ ಆರಂಭಿಸಿ ಹಗಲಿರುಳು ತಮೆಲ್ಲಿ ಸಹಾಯ ಯಾಚಿಸಿ ಕರೆ ಮಾಡಿದ ಜನರಿಗೆ ಮಾರ್ಗದರ್ಶನ ನೀಡಿತು. ವ್ಯಕ್ತಿಯು  ತನ್ನ ಪಾಸ್ ಪೋರ್ಟನ್   ಕಳೆದುಕೊಂಡ ಪಕ್ಷದಲ್ಲಿ  ಐಎಸ್ಎಫ್  ಸ್ವಯಂ ಸೇವಕ ತಂಡ ಅವರಿದ್ದ ಪ್ರದೇಶಕ್ಕೆ ತೆರಳಿಭಾರತೀಯ ರಾಯಭಾರ ಕಚೇರಿ  ನೀಡಿದ   ಫಾರ್ಮೊಂದನ್ನು   ಅವರಿಗಾಗಿ ಭರ್ತಿಗೊಳಿಸಿ ಸಹಿ ಪಡೆದು ತಾತ್ಕಾಲಿಕ  ಪಾಸ್ಪೋರ್ಟ್  (ಔಟ್ ಪಾಸ್) ಪಡ ಯಲು ಅದನ್ನು  ಸ್ವತ:  ರಾಯಭಾರ ಕಚೇರಿಗೆ ಸಲ್ಲಿಸಿದೆ.8

ಅತ್ತ ನೌಕರಿಯು ಇಲ್ಲದೆ ಇತ್ತ ಊರಿಗೆ ತೆರಳಲು  ಬೇಕಾದ  ದಾಖಲೆಗಳು ಇಲ್ಲದೆ  ಪರಿತಪಿಸುತ್ತಿದ್ದ  ಭಾರತೀಯ  ಅಧಿಕೃತನಿವಾಸಿಗಳಿಗೆ  ಕುವೈಟ್ ಸರಕಾರವು   ಘೋಷಿಸಿದ ಕ್ಷಮಾಧಾನವು   ಮರುಭೂಮಿಯಲ್ಲಿ ಸಿಕ್ಕದ ಓಯಸಿಸ್ ನಂತೆ ಭಾಸವಾದರೆ ,ಐಎಸ್ಎಫ್ ಸೇವೆಯು ಓಯಸಿಸ್’ಗ ತಲುಪಲು ಬೇಕಾದ ಊರುಗೋಳಿನಂತೆ ಆಸರೆಯಾಯತು.2

ಕುವೈಟಿನಲ್ಲಿ  ಈ ಹಿಂದಿನಿಂದಲೂ   ವಿಸಾ, ಪಾಸ್ ಪೋರ್ಟ್  ಮತ್ತು ಉದ್ಯೊಗಳಿಲ್ಲದೆ   ಸಂಕಷ್ಟದಲ್ಲಿರುವ  ಅನಿವಾಸಿಗಳಿಗೆಯಾವುದೇ ಜಾತಿ, ಧರ್ಮ , ಪ್ರಾದೇಶಿಕತೆಯ  ಬೇಧವಿಲ್ಲದೆ  ಸಮಸ್ಯೆಯ ಪರಿಹಾರ ಒದಗಿಸುವಲ್ಲಿ   ಇಂಡಿಯನ್  ಸೋಶಿಯಲ್ಫೋರಮ್ ಕುವೈಟ್ ಮುಂಚುಣಿಯಲ್ಲಿದೆ .FoodKit1 (1)

ಭಾರತೀಯ ರಾಯಭಾರ ಕಚೇರಿಯು(Indian Embassy)  ಕ್ಷಮಾದಾನ  ನಿಮಿತ್ತ ಅನಿವಾಸಿಗಳಿಗೆ  ಸರಿಯಾದ ಮಾಹಿತಿಯನ್ನುನೀಡುವ  ಸಲುವಾಗಿ ತನ್ನ ವ ಬ್ ಸೈಟಿನಲ್ಲಿ  ಅಧಿಕೃತವಾಗಿ ಘೋಷಿಸಿರುವ  ಹಲ್ಪ್ ಲೈನ್  ಪಟ್ಟಿಯಲ್ಲಿ ISF  ಸ್ವಯಂ ಸೇವಕರ ಹೆಸರನ್ನು ಸೇರಿಸಿತು  ಎಪ್ರೀಲ್ 16ರಿಂದ 20ರ ಅಮ್ನೆಸ್ಟಿ ದಿನಗಳಲ್ಲಿ ಐಎಸ್ಎಫ್ ಸ್ವಯಂ ಸೇವಕರು  ಭಾರತೀಯ ರಾಯಭಾರ ಕಛೇರಿಯ ಕೌಂಟರ್ ಗಳಲ್ಲಿ ಕುಳಿತು ಅನದಿಕೃತ  ನಿವಾಸಿಗಳಿಗೆ ಸೂಕ್ತ ಮಾರ್ಗದರ್ಶನ  ಹಾಗೂ ದಾಖಲೆಗಳಿಗೆ ಸಹಾಯ ಮಾಡಿದರು.

ಹಾಗೇಯೆ, ಪ್ರಶಕ್ತ   ಕುವೈಟ್  ಸರಕಾರವು ಕೋವಿಡ್-19 ನನ್ನು ನಿಯಂತ್ರಿಸುವ  ಸಲುವಾಗಿ ಕುವೈಟ್ ನಾದ್ಯಂತ  ಸಂಜೆ 4 ರಿಂದ ಬೆಳಗ್ಗೆ 8 ರ ತನಕ ಕರ್ಫ್ಯೂ ಘೋಷಿಸಿದ್ದು  ಪ್ರಮುಕ   ಎರಡು ಪ್ರದೇಶಗಳಲ್ಲಿ  ಸಂಪೂರ್ಣವಾಗಿ ಲಾಕ್ ಡೌನ್ ಮಾಡಿರುವುದರಿಂದ ಕೆಲವರ್ಗದ ಕಾರ್ಮಿಕರ ಸ್ಥಿತಿ  ದಯನೀಯವಾಗಿದೆ . ಈ ನಿಟ್ಟಿನಲ್ಲಿ  ದಾನಿಗಳ ಸಹಾಯದಿಂದ ISF ಸದಸ್ಯರು  ಈಗಾಗಲೇ  ಆಹಾರದ  ಕಿಟ್ಗಳನ್ನು    ಕುವೈಟಿನ ವಿವಿಧ ಪ್ರದೇಶಗಳಲ್ಲಿ ವಿತರಿಸಲು  ಸಫಲರಾಗಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter