ಬೆಂಬಲ ವಾಪಾಸ್ ಪಡೆಯಲು ಶಾಕೀನ್ ನಿಧರ್ಾರ: ಸಂಕಷ್ಟದಲ್ಲಿ ಆಪ್ ಸರಕಾರarvind111

 
ದೆಹಲಿ: ಆಡಳಿತ ವಹಿಸಿದ ದಿನದಿಂದ ಒಂದಿಲ್ಲೊಂದು ಸಮಸ್ಯೆಗಳನ್ನು ಮತ್ತು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುವ ದೆಹಲಿಯ ಆಮ್ ಆದ್ಮಿ ಸರಕಾರ ಮತ್ತೊಂದು ಪೇಚಿಗೆ ಸಿಲುಕಿದೆ. ಸರಕಾರ ರಚಿಸಲು ಬೆಂಬಲ ನೀಡಿದ ಪಕ್ಷೇತರ ಶಾಸಕ ರಣ್ಬೀರ್ ಶಾಕೀನ್ ಬೆಂಬಲ ವಾಪಾಸು ಪಡೆಯುವುದಾಗಿ ಹೇಳುವ ಮೂಲಕ ಆಪ್ ಸರಕಾರ ಪತನವಾಗುವ ಸೂಚನೆ ನೀಡಿದ್ದಾರೆ.
ಮುಂಡ್ಕಾ ಜಿಲ್ಲೆಯ ಸ್ವತಂತ್ರ ಅಭ್ಯಥರ್ಿಯಾಗಿರುವ ಶಾಕೀನ್ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರನ್ನು ಭೇಟಿ ಮಾಡಲಿದ್ದು ಈ ವೇಳೆ ಬೆಂಬಲ ವಾಪಾಸು ಪಡೆಯುವ ಬಗ್ಗೆ ಚಚರ್ಿಸಲಿದ್ದಾರೆ. ಕೇಜ್ರಿವಾಲ್ ಚುನಾವಣೆಯ ವೇಳೆ ಜನರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಶಾಕೀನ್ ದೂರಿದ್ದಾರೆ. ಶಾಕೀನ್ ಬೆಂಬಲ ವಾಪಾಸು ಪಡೆದಲ್ಲಿ 70 ಸದಸ್ಯರ ಅಸೆಂಬ್ಲಿಯಲ್ಲಿ ಆಪ್ ಸರಕಾರದ ಶಾಸಕರ ಸಂಖ್ಯೆಯು 35ಕ್ಕೆ ಇಳಿಯಲಿದ್ದು ಅಗತ್ಯ ಬಹುಮತಕ್ಕೆ ಒಂದು ಸ್ಥಾನ ಕಡಿಮೆ ಬೀಳಲಿದೆ. ಒಂದೆಡೆ ಕಾಂಗ್ರೆಸ್ ಪಕ್ಷವು ಜನಲೋಕಪಾಲ ಮಸೂದೆಯನ್ನು ಕಾನೂನು ಬಾಹಿರವಾಗಿ ಕೇಜ್ರಿವಾಲ್ ಜಾರಿಗೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆಯುವುದಾಗಿ ಬೆದರಿಕೆ ಹಾಕುತ್ತಿದ್ದರೆ, ಶಾಕೀನ್ ಹೇಳಿಕೆಯಿಂದ ಜನಸಾಮಾನ್ಯನ ಪಕ್ಷ ಎಂದು ಅಧಿಕಾರ ಗಳಿಸಿದ ಆಪ್ ಕಾಯರ್ಾಬಾರ ಕೊನೆಗೊಳ್ಳುವ ಲಕ್ಷಣಗಳು ಗೋಚರಿಸುತ್ತಿದೆ

By suddi9

Leave a Reply

Your email address will not be published. Required fields are marked *