02

ಕಟೀಲು: ಆಧುನಿಕ ಜೀವನ ಶೈಲಿಗೆ ತಕ್ಕ ಅಪ್ಪಟ ಭಾರತೀಯ ಸಸ್ಯಾಹಾರಿ ಸಿದ್ಧ ತಿಂಡಿ ತಿನಿಸುಗಳ ತಯಾರಿಕೆಗೆ ಅಗತ್ಯವಿರುವ ಮಸಾಲ ಪದಾರ್ಥಗಳಿಗೆ ಹೆಸರುವಾಸಿಯಾಗಿರುವ  ಎಂಟಿಆರ್  ಫುಡ್ಸ್ ಇದೀಗ ದೇವಸ್ಥಾನದಲ್ಲಿ ಉಪರಹಾರವನ್ನು ಸಿದ್ಧಪಡಿಸಿ ಭಕ್ತಾಧಿಗಳಿಗೆ ರುಚಿ ಸವಿಯಲು ಅನುವು ಮಾಡಿಕೊಟ್ಟ ದೃಶ್ಯವೊಂದು ಇಲ್ಲಿನ ಕಟೀಲು ದೇವಸ್ಥಾನದಲ್ಲಿ ರವಿವಾರ ಕಂಡು ಬಂತು.

ಬೆಂಗಳೂರಿನ ಎಂಟಿಆರ್ ಕಂಪನಿಯ ತಂಡವೊಂದು ಕಟೀಲು ದೇವಸ್ಥಾನದಲ್ಲಿ 10 ದಿನಗಳ ಕಾಲ ತಾತ್ಕಾಲಿಕ ಮಳಿಗೆ ತೆರೆದು ಅಭಿರುಚಿಗೆ ತಕ್ಕಂತೆ ಎಂಟಿಆರ್ ಪದಾರ್ಥಗಳಿಂದ ಟೊಮೇಟೊ ರೈಸ್‌, ಲೆಮನ್‌ ರೈಸ್‌, ಸಾಂಬಾರ್‌ ರೈಸ್‌ ಮತ್ತಿತರ ಖಾದ್ಯಗಳನ್ನು ತಯಾರಿಸಿ ಆಗಮಿಸುವ ಭಕ್ತಾದಿಗಳಿಗೆ ರುಚಿ ಸವಿಯಲು ಅವಕಾಶ ಮಾಡಿಕೊಟ್ಟಿದೆ. ಇದರಿಂದ ಬಾಯಿಚಪ್ಪರಿಸಿಕೊಂಡಿರುವ  ಭಕ್ತಾದಿಗಳಿಗೂ ಸಂತಸದ ಮನೆ ಮಾಡಿದೆ.

ಇನ್ನೂ ಈ ತಂಡ ನಗರದ ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ಮಂಗಳಾದೇವಿ, ಕದ್ರಿ ಹಾಗೂ ಕುದ್ರೋಳಿ ದೇವಸ್ಥಾನದಲ್ಲಿ ಕೆಲ ತಿಂಗಳ ಹಿಂದೆ ಇದೇ ಪ್ರಕ್ರಿಯೆಯನ್ನು ಮುಂದುರಿಸಿಕೊಂಡಿತ್ತು.

04

05

01

By suddi9

Leave a Reply

Your email address will not be published. Required fields are marked *