ಜೇಸಿಐ ಉಡುಪಿ ಸಿಟಿ ಘಟಕಕ್ಕೆ ಎಕ್ಸಲೆನ್ಸಿ ಪ್ರಶಸ್ತಿ
ಕಟಪಾಡಿ: ಜೇಸಿಐ ಉಡುಪಿ ಸಿಟಿ ಘಟಕವು ಎಕ್ಸಲೆನ್ಸಿ ಪ್ರಶಸ್ತಿ ಸಹಿತ ವಿವಿಧ ಪುರಸ್ಕಾರವನ್ನು ಪಡೆದುಕೊಂಡಿತ್ತು. ಜುಲೈ.27ರಂದು ಶಂಕರಪುರ ಜೇಸಿ ಭವನದಲ್ಲಿ ನಡೆದ ವಲಯ 15 ರ ಮಧ್ಯಂತರ ಸಮ್ಮೇಳನ “ಬದಲಾವಣೆ -2020 ” ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಲಯಾಧ್ಯಕ್ಷ ಕಾತಿ೯ಕೇಯ ಮಧ್ಯಸ್ಥ ರವರಿಂದ ಪ್ರಶಸ್ತಿಯನ್ನು ಘಟಕಾಧ್ಯಕ್ಷೆ ತನುಜಾ ಮಾಬೆನ್ ರವರು ಪಡೆದುಕೊಂಡರು.
ಘಟಕವು ಅತ್ಯುತ್ತಮ ಕಾಯ೯ಕ್ರಮ, ತರಬೇತಿ ವಿಭಾಗ ಸೇರಿದಂತೆ ವಿವಿಧ ಮನ್ನಣೆಯನ್ನು ಪಡೆದುಕೊಂಡಿತ್ತು.ಈ ಸಂದಭ೯ದಲ್ಲಿ ವಲಯ ಉಪಾಧ್ಯಕ್ಷ ಲೋಕೇಶ್ ರೈ, ಅಶೋಕ್ ಚುಂತಾರ್, ಅಶ್ವಿನಿ ಐತಾಳ, ಜಬ್ಬಾರ್ ಸಾಹೇಬ್, ಉದಯ ನಾಯ್ಕ್, ಜಗದೀಶ್ ಶೆಟ್ಟಿ, ಪೂವ೯ ವಲಯ ಉಪಾಧ್ಯಕ್ಷ ರಾಘವೇಂದ್ರ ಪ್ರಭು,ಕವಾ೯ಲ್ ಮುಂತಾದವರಿದ್ದರು.