ಕೈಕಂಬ: ಕಂದಾವರ ಗ್ರಾಮದ ಬೈಲು ಮೂಡುಕರೆ ಕುಟುಂಬದ ಏತಮೊಗರು ದೊಡ್ಡಮನೆಯಲ್ಲಿ ಎ. 29ರಂದು ರಾತ್ರಿ ಮಹಿಷಂದಾಯ, ಪ್ರಧಾನ ದೈವಗಳಾದ ಧೂಮಾವತಿ ಮತ್ತು ಬಂಟ ದೈವ, ಕೊಡಮಣಿತ್ತಾಯ, ಪಂಜುರ್ಲಿ ಹಾಗೂ ಸಹಪರಿವಾರ ದೈವಗಳಿಗೆ ಧರ್ಮ ನೇಮೋತ್ಸವ ನಡೆಯಿತು.
ಮಧ್ಯಾಹ್ನ ಧೂಮಾವತಿ ಪಾತ್ರಿಯ ದರ್ಶನ, ಅಭಯ ಪ್ರದಾನದ ಬಳಿಕ ಮಹಾ ಅನ್ನಸಂತರ್ಪಣೆಗಾಗಿ ಸಿದ್ಧಗೊಂಡಿದ್ದ ಅನ್ನಛತ್ರದಲ್ಲಿ ದೈವದ ಪಾತ್ರಿ ಪ್ರಸಾದ ಹಾಕುವುದರೊಂದಿಗೆ ಅನ್ನದಾನಕ್ಕೆ ಚಾಲನೆ ನೀಡಿತು. ಅನ್ನದಾನದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಮಧ್ಯಾಹ್ನ 2ರಿಂದ 5ರವರೆಗೆ ಶ್ರೀ ಯಕ್ಷದೇವಾ ಮಿತ್ರ ಕಲಾ ಮಂಡಳೀ(ಬೆಳುವಾಯಿ) ಇವರ ಸಂಯೋಜನೆಯಲ್ಲಿ `ಧುರವೀಳ್ಯ’ ತಾಳಮದ್ದಲೆ ಜರುಗಿತು. ರಾತ್ರಿ ದೈವಗಳಿಗೆ ಅದ್ದೂರಿ ಧರ್ಮನೇಮೋತ್ಸವ ನಡೆಯಿತು. ಈ ಎಲ್ಲ ಕಾರ್ಯಕ್ರಮಗಳು ದೊಡ್ಡಮನೆ ಯಜಮಾನ ಅಶೋಕ ಶೆಟ್ಟಿ, ಹರೀಶ ಶೆಟ್ಟಿ ಹಾಗೂ ಕುಟುಂಬಿಕರ ಮುಂದಾಳತ್ವದಲ್ಲಿ ಜರುಗಿತು.


