ನವದೆಹಲಿ: ಕಾಂಗ್ರೆಸ್ ವಿರುದ್ದ ಇರುವ ಮೂರು ಬಿಜೆಪಿ ಜಾಹಿರಾತುಗಳನ್ನು ಕೆಪಿಸಿಸಿ ಸಲ್ಲಿಸಿದ ದೂರಿನ ನಂತರ ಮಾಧ್ಯಮದ ಪ್ರಮಾಣೀಕರಣ ಮತ್ತು ನಿರ್ವಹಣಾ ಸಮಿತಿ (ಎಂಸಿಎಂಸಿ) ನಿಷೇಧಿಸಿದೆ.ಈ ಜಾಹಿರಾತುಗಳು ಚುನಾವಣಾ ಆಯೋಗದ ನಿಯಮಗಳನ್ನು ಉಲ್ಲಂಘಿಸುತ್ತವೆ ಎಂದು ಕೆಪಿಸಿಸಿ ದೂರು ನೀಡಿತ್ತು, ಈ ಹಿನ್ನೆಲೆಯಲ್ಲಿ ಈಗ ಸಮಿತಿಯು ಈ ಕ್ರಮವನ್ನು ತೆಗೆದುಕೊಂಡಿದೆ.
ಕೆಪಿಸಿಸಿ ಪರವಾಗಿ ವಿಧಾನಪರಿಷತ್ ಸದಸ್ಯ ವಿ.ಎಸ್ ಉಗ್ರಪ್ಪ ಆವರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ದೂರನ್ನು ನೀಡಿದ್ದರು. ಜನ ವಿರೋಧಿ ಸರ್ಕಾರ, ವಿಫಲ ಸರ್ಕಾರ, 35 ಸೆಕೆಂಡುಗಳ ಅವಧಿಯ ಜಾಹಿರಾತುಗಳಾಗಿವೆ,ಇದೇ ರೀತಿ ಮೂರು ಭಾಗ್ಯ 50 ಸೆಕೆಂಡ್ ಗಳ ಜಾಹಿರಾತ್ ನ್ನು ಹೊಂದಿವೆ. ಈಗ ಈ ಮೂರು ಜಾಹಿರಾತುಗಳನ್ನು ಪ್ರಸಾರ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಪಿ.ಎಸ್.ಹರ್ಷ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ವಿಎಸ್ ಉಗ್ರಪ್ಪ ತಮ್ಮ ದೂರಿನಲ್ಲಿ ಈ ಜಾಹಿರಾತುಗಳು ಸಂಪೂರ್ಣ ಸುಳ್ಳು ಅಂಶಗಳು ಹೊಂದಿವೆ ಮತ್ತು ವೈಯಕ್ತಿಕವಾಗಿ ಮುಖ್ಯಮಂತ್ರಿಗಳ ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತವೆ ಎಂದು ತಿಳಿಸಿದ್ದರು.

