IMG-20180427-WA0045

ಬಂಟ್ವಾಳ: ತಾಲೂಕಿನ ಬಿ.ಸಿ.ರೋಡ್ ನಲ್ಲಿರುವ ಪಕ್ಷದ ಕಾರ್ಯಲಯದಲ್ಲಿ ಬಿಜೆಪಿ ಚುನಾವಣಾ ಪ್ರಭಾರಿಗಳ ಕಾರ್ಯಾಗಾರ ಇತ್ತೀಚಿಗೆ ನಡೆಯಿತು.

ಈ ವೇಳೆ ಬಿಜಿಪಿ ಚುನಾವಣಾ ಉಸ್ತುವಾರಿ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮಹೇಂದ್ರ ಸಿಂಗ್ ಮಾತನಾಡಿ, ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಆಂತರಿಕ ಸರ್ವೆ ಮತ್ತು ಖಾಸಗಿ ಸಂಸ್ಥೆಗಳ ಸರ್ವೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ವಾತಾವರಣವಿದ್ದು, ಅದಕ್ಕಾಗಿ ಕಾರ್ಯಕರ್ತರು ಹಗಲು ರಾತ್ರಿ ಶ್ರಮ ವಹಿಸಿ ಬಂಟ್ವಾಳದಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕೆಂದು ಎಂದು ಸಲಹೆ ನೀಡಿದರು.

ರಾಜೇಶ್ ನಾಯ್ಕ್‍ರನ್ನು ನಿಮ್ಮ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಿದ್ದೇವೆ ಅವರನ್ನು ಗೆಲ್ಲಿಸುವ ಮೂಲಕ ಜನವಿರೋಧಿ ಕಾಂಗ್ರೇಸ್ ಸರಕಾರವನ್ನು ಬದಲಾಯಿಸಿ ಬಿಜೆಪಿ ಗೆಲ್ಲಿಸಬೇಕೆಂದು ಕಾರ್ಯಕತರಲ್ಲಿ ಮನವಿ ಮಾಡಿದರು.

ಬಂಟ್ವಾಳ ಕ್ಷೇತ್ರ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಮಾತನಾಡಿ, ಕಳೆದ ನಾಲ್ಕುವರೆ ವರ್ಷಗಳಿಂದ ಬಂಟ್ವಾಳ ಕ್ಷೇತ್ರದ 59 ಗ್ರಾಮಗಳ 246 ಬೂತ್‍ಗಳ ಮತದಾರರ ಒಡನಾಟವನ್ನರಿಸಿಕೊಂಡಿದ್ದೇನೆ. ಜನರ ಸಂಕಷ್ಟದ ನಾಡಿ ಮಿಡಿತವನ್ನು ಅರಿತಿದ್ದೇನೆ. ಕಾನೂನು ಸುವ್ಯವಸ್ಥೆಯ ಬಲಪಡಿಸಿ ಸಾಮರಸ್ಯದ ಭಯಮುಕ್ತ ಬಂಟ್ವಾಳದ ನಿರ್ಮಾಣಕ್ಕೆ ನಾವೆಲ್ಲರೂ ಈ ಚುನಾವಣೆಯ ಮೂಲಕ ಹೋರಾಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ ಕ್ಷೇತ್ರ ಸಮಿತಿ ಅಧ್ಯಕ್ಷರಾದ ದೇವದಾಸ ಶೆಟ್ಟಿ ,ಪ್ರಧಾನಕಾರ್ಯದರ್ಶಿಗಳಾದ ಮೋನಪ್ಪ ದೇವಸ್ಯ,ಉಪಾಧ್ಯಕ್ಷರಾದ ಶ್ರೀಕಾಂತ್ ಶೆಟ್ಟಿ,ಬೊಲ್ಲುಕಲ್ಲು ನಾರಾಯಣ ಪೂಜಾರಿ,ಕಾರ್ಯದರ್ಶಿಗಳಾದ ರಮನಾಥ ರಾಯಿ,ಸೀತಾರಾಮ ಪೂಜಾರಿ,ಗಣೇಶ್ ರೈ ಮಾಣಿ, ಪ್ರಕಾಶ್ ಅಂಚನ್,ರಂಜಿತ್ ಮೈರ ಉಪಸ್ಥಿತರಿದ್ದರು.

IMG-20180427-WA0044

By suddi9

Leave a Reply

Your email address will not be published. Required fields are marked *