ಬಂಟ್ವಾಳ: ಪ್ರಧಾನಿ ಮೋದಿಗೆ ಮತಿ ಭ್ರಮಣೆಯಾಗಿದ್ದು, ನಿಮಗೆ ತೀಟೆ ತೀರಿಸೋಕೆ ಕರ್ನಾಟಕ ಬೇಕು ಎಂದು ನಟ ಪ್ರಕಾಶ್ ರೈ ಕಿಡಿಕಾರಿದ್ದಾರೆ.
ತಾಲೂಕಿನಲ್ಲಿ ನಡೆದ ಸ್ವಾಭಿಮಾನಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಹಿಂದೆ ಆರೆಸ್ಸೆಸ್ ಇದೆ. ಆರೆಸ್ಸೆಸ್ ಅಜೆಂಡಾ ಮತ್ತು ಸಿದ್ಧಾಂತವನ್ನೇ ತನ್ನ ಸಿದ್ಧಾಂತವೆಂದು ಹೇಳಿ ತಿರುಗಾಡುತ್ತಿರುವ ಬಿಜೆಪಿ ಬೆದರು ಬೊಂಬೆ ಪಕ್ಷ ಎಂದು ಟೀಕಿಸಿದರು
ಇತ್ತೀಚೆಗೆ ಪಕ್ಷದ ರಾಜ್ಯ ನಾಯಕರೊಂದಿಗೆ ವಿಡಿಯೋ ಸಂವಾದ ನಡೆಸಿದ್ದ ವೇಳೆ ಮೋದಿಯವರು ನನಗೆ ಕನ್ನಡ ಇಷ್ಟ ಅಂತ ಹೇಳಿದ್ದರು. ಚುನಾವಣೆ ನಡೆದ ಬಳಿಕ ಮೋದಿ ನಿರುದ್ಯೋಗಿ ಆಗುತ್ತಾರೆ. ಆ ನಂತರ ಅವರು ಕರ್ನಾಟಕಕ್ಕೆ ಬರಲಿ. ಇಲ್ಲಿಗೆ ಬಂದು ಮೋದಿ ಕನ್ನಡ ಕಲಿಯಲಿ. ಆದರೆ, ಶಾಲಾ ಮಕ್ಕಳ ಜತೆ ಸೇರಿಕೊಂಡು ಕನ್ನಡ ಕಲಿಯುವುದು ಬೇಡ. ಶಾಲಾ ಮಕ್ಕಳ ಜತೆಗೆ ನಿಮಗೆ ಸ್ಥಾನ ಇಲ್ಲ. ವಯಸ್ಕರ ಶಿಕ್ಷಣ ಕೇಂದ್ರಕ್ಕೆ ಸೇರಿ ಕನ್ನಡ ಕಲಿಯಲಿ ಎಂದು ವ್ಯಂಗ್ಯವಾಡಿದರು.
ಬಿಜೆಪಿಗರು ದೇಶದ ಜನತೆಗೆ ಅಭಿವೃದ್ಧಿ ವಿಚಾರದ ಬಗ್ಗೆ ಹೇಳಲಿ. ಆದರೆ ಸುಳ್ಳು ಹೇಳಬೇಡಿ. ಸುಳ್ಳನ್ನೇ ಹೇಳುವ ಜಾಯಾಮಾನದವರು ನೀವು ಎಂದು ಬಿಜೆಪಿ ವಿರುದ್ಧ ವಗ್ದಾಳಿ ನಡೆಸಿದರು.

