ನ್ಯಾಯ ಬೇಡ ಅನ್ಯಾಯ ತಡೆಯಿರಿ!
ಕೆಚ್ಚೆದೆಯಲಿ ಕಿಚ್ಚು ಹರಡುತ್ತಿದೆ
ಹುಚ್ಹುಡುಗನ ಹೃದಯ ಮಿಡಿಯುತ್ತಿದೆ
ಹೆಚ್ಚೇನು ಹೇಳಬೇಕು ,ಪರೋಕ್ಷವಾಗಿ
ನೀವೇ ನೋಡಿ..!
ಗಡಿಯಲ್ಲಿ ದೇಹ ಅನಾಥವಾಗಿದೆ
ಗಡಿನಾಡಲ್ಲಿ ಕೋಮು ಹೆಚ್ಚಾಗಿದೆ
ಎಡೆಯಲ್ಲಿ ಸಿಕ್ಕಿದ ನಾನು
ಮಿಸುಕಾಡಲಾಗದೆ ಉಸಿರು ಕಟ್ಟುತ್ತಿರುವೆ..!
ಅಚ್ಛಾ ದಿನ್ ಬರಬಹುದೆಂದು ಕಾದೆ
ಬೇಟಿ ಬಚಾವು ಆಗಬಹುದೆಂದುಕೊಂಡೆ
ಸ್ವಚ್ಛ ಭಾರತದಲ್ಲಿ ಹಸುಳೆಗಳು ಅಸು ನೀಗಿದಾಗ
Incredible India ನಂಬಲಾಸಾಧ್ಯವಾಯಿತು..!
ಬದಲಾಗುವುದೆ ಜಗ, ಬದಲಾಗುವುದೆ ಜನ
ಬದಲಿ ಬದಲಿ ರಾಜ್ಯ ನಾಯಕರ ಬದಲಿಸಿದರು
ಬದಲಾವಣೆ ಕಾಣುತ್ತಿಲ್ಲ, ಬರಡಾಗಿದೆ ನನ್ನೀ ಮನ
ಬರಿದಾಗಿದೆ ದೇಶದ ಮೇಲಿನ ಋಣ..!
ಹಮ್ ಏಕ್ ಹೇ ಎಂದ್ಹೇಳಿದವರು
ಹಿಗ್ಗಾಮುಗ್ಗಾ ಥಳಿಸಿ ಸಾಯುತ್ತಿದ್ದಾರೆ
ಸಮಾನತೆ ನಮ್ಮ ಹಕ್ಕೆಂದು ಹೋರಾಡಿದರೂ
ನ್ಯಾಯ ದೇವತೆಯ ಕಣ್ಣಿಗೆ ಬಟ್ಟೆ ಕಟ್ಟಿದ್ದಾರೆ
ಅಲ್ಲಲ್ಲಿ ಕೆಲವರು ಪ್ರತಿಭಟಿಸಿ ಹೆಸರುಗಳಿಸುತ್ತಾರೆ
ಬರಹಗಾರರು ಸಂತಾಪ ತೋರಿ ಕಾವ್ಯಗಳ
ಹೆಣೆದು ಕವಿಕೋಷ್ಠಿ ಇಡುತ್ತಿದ್ದಾರೆ
ಮಾಧ್ಯಮದವರು ಏನೂ ನಡೆದಿಲ್ಲವೆಂದು
ಮೌನವಾಗಿ ದಿನ ಕಳೆಯುತ್ತಿದ್ದಾರೆ..!
ಈ ಹುಚ್ಚು ಮನಸಿಗೊಂದೆ ಆಸೆ ಅನ್ಯಾಯ
ನಡೆದಲ್ಲಿ ಕ್ಷಣದಲ್ಲೆ ನ್ಯಾಯ ಒದಗಿಸಿ
ಅಪರಾಧಿಯಾದರು ನಿರಪರಾಧಿಯೆಂದು
ಸುಳ್ಳು ಸಾಕ್ಷಿಯ ಹುಟ್ಟಿಸುವ ಮುನ್ನವೆ
ಖೈದಿಯನ್ನು ಕೊಂದು ಬಿಡಿ ,ಕರುಣೆ ಇಲ್ಲದೆ
ಕೊಲೆ ಮಾಡಿದವನ ಕರುಣೆ ತೋರಿ ರಕ್ಷಿಸುವುದೇಕೆ.
ನನಗೆ ನ್ಯಾಯ ಬೇಡ ಅನ್ಯಾಯ ಆಗುವುದನ್ನ ತಡೆಯಿರಿ.!
ಕವಿ: ಅನ್ಸಾಲ್.ಸಿ (ಕಾವ್ಯದ ತವರೂರು)