Published On: Wed, Jun 13th, 2018

ಕವಿ ವಿ.ಜಿ. ಭಟ್ಟ ಸ್ಮರಣಾರ್ಥ: ಕವನ ಸ್ಪರ್ಧೆಗೆ ಆಹ್ವಾನ

V G Bhat (Poet)

ಮುಂಬಯಿ: ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ, ಕನ್ನಡದ ಉದ್ದಾಮ ಕವಿ ದಿ. ವಿ.ಜಿ ಭಟ್ಟ ಸ್ಮರಣಾರ್ಥವಾಗಿ ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಆಸಕ್ತರು ಯಾವುದೇ ವಿಷಯದ ಕುರಿತಂತೆ ಕನ್ನಡ ಕವಿತೆಗಳನ್ನು ರಚಿಸಬಹುದಾಗಿದೆ. ಇಲ್ಲಿ ಯಾವುದೇ ಪ್ರವೇಶ ಶುಲ್ಕ ಇಲ್ಲ.

ಪ್ರಥಮ ಬಹುಮಾನ ರೂಪಾಯಿ 10,000 ರೂ., ದ್ವಿತೀಯ ಬಹುಮಾನ 5,000 ರೂ., ತೃತೀಯ ಬಹುಮಾನ 3,000 ರೂ., ಪ್ರೋತ್ಸಾಹಕ ಬಹುಮಾನ  1,000 ರೂ. ನೀಡಲಾಗುವುದು.

ಸ್ಪರ್ಧೆಯು ಕೆಲವೊಂದು ನಿಯಮಾವಳಿಗಳನ್ನು ಇರಿಸಿದ್ದು, ಕವನಗಳು ಸ್ವರಚಿತವಾಗಿರಬೇಕು. ಅನುವಾದ, ಅನುಕರಣೆ ಆಗಿರಕೂಡದು. ಕವನಗಳು ಸುಮಾರು ಮೂವತ್ತು ಸಾಲಿನ ಮಿತಿಯಲ್ಲಿರಲಿ. ಕಾಗದದ ಒಂದೇ ಮಗ್ಗುಲಲ್ಲಿ ಚಿತ್ತಿಲ್ಲದಂತೆ ಸ್ಫುಟವಾಗಿ ಬರೆದು ಕಳುಹಿಸಿ. (ಹಸ್ತ ಲಿಖಿತ ಯಾ ಕಂಪ್ಯೂಟರ್ ಮುದ್ರಿತ).

ನಮ್ಮ ಇ-ಮೇಯ್ಲ್ havyakamumbai@hotmail.com ಮೂಲಕ ಅಥವಾ ನಮ್ಮ HAVYAKA WELFARE TRUST,B-207, Valmiki Apts, Near Pharmacy College, Sundar Nagar, Kalina, Vidyanagari P.O.,Mumbai – 400 098. ವಿಳಾಸಕ್ಕೂ ಕಳುಹಿಸಬಹುದು.

ಕವನದ ಕವಿಗಳ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಇ-ಮೇಯ್ಲ್ ಐಡಿ ಪ್ರತ್ಯೇಕ ಕಾಗದದಲ್ಲಿ ಬರೆದು ಕಳುಹಿಸತಕ್ಕದ್ದು. ಸ್ಪರ್ಧೆಗೆ ಕಳುಹಿಸಿದ ಕವನಗಳು ಫಲಿತಾಂಶ ಬರುವ ತನಕ ಬೇರೆ ಎಲ್ಲಿಯೂ ಪ್ರಕಟವಾಗಬಾರದು. ಒಬ್ಬರು ಒಂದೇ ಕವನವನ್ನು ಬರೆದು ಕಳುಹಿಸಬೇಕು. ಸ್ಪರ್ಧೆಗೆ ಬಂದ ಕವನಗಳನ್ನು ಮರಳಿಸಲಾಗುವುದಿಲ್ಲ. ತೀರ್ಪುಗಾರರ ತೀರ್ಮಾನವೇ ಅಂತಿಮ. ಕವನಗಳನ್ನು ಸ್ವೀಕರಿಸುವ ದಿನ ಜೂ.30 ಅಂತಿಮವಾಗಿದ್ದು, ಆಯ್ಕೆಯಾದ ಕವನಗಳ ಫಲಿತಾಂಶವನ್ನು ಹವ್ಯಕ ವೆಲ್ಫೇರ್‍ಟ್ರಸ್ಟ್ ನ  ಮಾಸಿಕ `ಹವ್ಯಕ ಸಂದೇಶ’ ಪತ್ರಿಕೆಯಲ್ಲಿ ಹಾಗೂ ಸ್ಥಳೀಯ ದಿನಪತ್ರಿಕೆಯಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಟಿಸಲಾಗುವುದು.

 

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter