when-men-fail-to-perform-1

ನೀನ್ಯಾಕೆ ಅಳುತ್ತಿರುವೆ ನಿನಗೇನಾಗಿದೆ ಕೊರತೆ
ನಿನ್ನದೆಂದು ನೀನೇನೂ ತರದಿರುವಾಗ..!

ಹುಟ್ಟು ಸಾವಿನ ಮದ್ಯೆ ಮೂರುದಿನದ ಬಾಳಲ್ಲಿ
ನನ್ನ ಮೇಲೆ ದೌರ್ಜನ್ಯ ಮಾಡಿ ನೀನೇನು ಸಾಧಿಸಿದೆ..?

ಕಷ್ಟ ಸುಖವೆಂದು ಎರಡಾಗಿ ಜೀವನವ ಬೇರ್ಪಡಿಸಿ
ಜಿಗುಪ್ಸೆಯಾಗಿದೆ ಎಂದು ದೇವರನ್ನ ನಿಂಧಿಸುವೆ..?

ಹೇ ಹುಚ್ಚು ಮಾನವ ನೀ ನೊಂದು ಬೆಂದು ಬದುಕುತ್ತಿರುವೆಯೆಂದು ಹೇಳುತ್ತಿರುವಿಯಲ್ಲ..?
ನಿಜವಾಗಿಯೂ ನೊಂದು ಬೆಂದು ಕರಗಿ ನಡುಗಿ
ಬದುಕುತ್ತಿರುವುದು ನಾನು ಅದ್ಯಾಕೆ ನೀ ಗಮನಿಸಿಲ್ಲ..?

ನಿನ್ನೆ ಹುಟ್ಟಿ ನಾಳೆ ಸತ್ತು ನಿನ್ನವರಿಗೆ ಜನ್ಮಕೊಟ್ಟು ಹೋಗುವ ಮೂರುದಿನದ ಯಾತ್ರಿಕ ನೀನು
ನಾನು ಯುಗ ಯುಗಗಳಿಂದ ಇಲ್ಲೆ ಇದ್ದು ಬದಲಾಗದೆ
ಪ್ರತಿ ವರ್ಷದ ಹಲವು ತಿಂಗಳು ಕೆಲವು ಕಾರಣಕ್ಕೆ..!

ನೊಂದು ಬೆಂದು ಕರಗಿ ನಡುಗಿ ನಲುಗಿ ಬದುಕಿ
ಚಿಗುರಿ ಹಚ್ಚ ಹಸಿರಾಗಿ ಜಿರಂಜೀವಿಯಾಗಿರುವೆ..!

ನಾಳೆಗೆಂದು ನೀನು ಇರುವುದೆಲ್ಲವ ಕಾಪಾಡುವಾಗ
ನೀ ಮೆಟ್ಟಿ ನಿಂತಿರುವ ನನ್ನನ್ಯಾಕೆ  ತೊಟ್ಟಿ ಮಾಡಿದೆ..!

ನಿನ್ನ ಸುಖಕ್ಕಾಗಿ  ಕಟ್ಟಡಗಳ ಸಾಲು ಹೆಣೆಯುವಾಗ
ನನ್ನೆದೆಯ ಮೇಲೆ ಭಾರಗಳು ತುಂಬಿದ್ದೆ..!

ನೀನಂದು ಕೊಂಡಂತೆ  ಶಾಶ್ವತ ಜೀವನ ನಿನ್ನದಲ್ಲ
ಈ ಕಷ್ಟ ಸುಖ ನೋವುಗಳೆಲ್ಲ ನಿನ್ನ ಭಾವನೆ ಮಾತ್ರ..!

ಪಾಪ ಪುಣ್ಯಗಳ ಮೇಲಿನ ವೇದ ಸಿದ್ಧಾಂತಗಳರಿತು

ನೋವು ನಲಿವಿನ ಭಾವನೆಗಳ ಮರೆತು ಬದುಕು ನೀ..!

ನಿನ್ನವರ ಪ್ರೀತಿಸುವ ಹಾಗೆ ನನ್ನನ್ನು ಪ್ರೀತಿಸು ನೀನು
ನಿನ್ನವರ ನನ್ನವರ ಹಾಗೆ ನಾನು ಪ್ರೀತಿಸುವೆ..!

ಕವಿ: ಅನ್ಸಲ್.ಸಿ, ಕಾವ್ಯದ ತವರೂರು

 

By suddi9

Leave a Reply

Your email address will not be published. Required fields are marked *