ನವಜಾತ ಶಿಶುವೊಂದು ಹುಟ್ಟಿದ ಕೇವಲ ಮೂರು ದಿನಗಳಲ್ಲಿ ಯಾರ ಸಹಾಯವೂ ಇಲ್ಲದೇ ಹಾಲಿನ ಬಾಟಲ್ ಹಿಡಿದು ಹಾಲು ಕುಡಿಯುತ್ತಿದೆ. ಇಂತಹದೊಂದು ವಿಸ್ಮಯ ಅಮೇರಿಕಾದಲ್ಲಿ ನಡೆದಿದ್ದು ವೈದ್ಯಲೋಕವನ್ನೇ ಅಚ್ಚರಿಗೊಳಿಸಿದೆ. ಅಮೇರಿಕಾದ ಕ್ವೀನ್ಸ್ ಆಸ್ಪತ್ರೆಯಲ್ಲಿ ಆಗಸ್ಟ್ 3ರಂದು ಒನಾಯಿ ಚಿಡೊಜಿ ಅವರು ಈ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ವೈದ್ಯ ಲೋಕಕ್ಕೆ ಅಚ್ಚರಿ ಎನ್ನುವಂತೆ ಹುಟ್ಟಿದ ಮೂರೇ ದಿನಗಳಲ್ಲಿ ಮಗು ತಾನಾಗಿಯೇ ಹಾಲಿನ ಬಾಟಲ್ ಹಿಡಿದು ಹಾಲು ಕುಡಿಯುತ್ತಿದೆ. ಈ ಬಗ್ಗೆ ವೈದ್ಯರು ಸಹ ಅಚ್ಚರಿ ವ್ಯಕ್ತಪಡಿಸಿದ್ದು ಜಗತ್ತಿನಾದ್ಯಂತ ತಾಜಾ ಸುದ್ಧಿಯಾಗಿ ಹರಿದಾಡುತ್ತಿದೆ. ಸಾಮಾನ್ಯವಾಗಿ ವೈದ್ಯರು ಹೇಳುವಂತೆ ಯಾವುದೇ ಮಗು ಹುಟ್ಟಿದ ಆರು ತಿಂಗಳ ನಂತರವಷ್ಟೇ ಈ ರೀತಿ ಸ್ವತಃ ಕೈಯಿಂದ ಹಿಡಿದು ಹಾಲು ಕುಡಿಯಲು ಸಾದ್ಯ. ಆದರೆ ಈ ಮಗು ಮಾತ್ರ ಜಗತ್ತಿನ ವೈದ್ಯಲೋಕದ ಅಚ್ಚರಿಗಳಲ್ಲಿ ಒಂದಾಗಿದೆ.

By suddi9

Leave a Reply

Your email address will not be published. Required fields are marked *