ಲಂಡನ್: ಎಬೋಲಾ ನಿಯಂತ್ರಣಕ್ಕೆ ಶತಾಯಗತಾಯ ಪ್ರಯತ್ನ ನಡೆಸುತ್ತಿರುವ ವಿಶ್ವ ಆರೋಗ್ಯ ಸಂಸ್ಥೆಯ ಹಾಗೂ ಇಂಗ್ಲೆಂಡ್ ಸರಕಾರ ದಕ್ಷಿಣಾಫ್ರಿಕಾದಿಂದ ಎಬೋಲಾದ ಅಧ್ಯಯನ ಮಾಡಲು ಚಾರಿಟೇಬಲ್ ಟ್ರಸ್ಟ್ ನಿಮರ್ಿಸಿದ್ದು ಬರೋಬ್ಬರಿ 10.8 ದಶಲಕ್ಷ ಡಾಲರ್ ಬಿಡುಗಡೆ ಮಾಡಿದೆ.
ಇದು ಮುಂದಿನ ಸೆ.8ರಿಂದ ಕಾಯರ್ಾರಂಭಗೊಳ್ಳಲಿದೆ. ಎಬೋಲಾ ಪೀಡಿತರಿಗೆ ಚಿಕಿತ್ಸೆ ನೀಡಲು ತರಬೇತಿ, ಸಂಶೋಧನಾತರ್ಿಗಳಿಗೆ ಎಬೋಲಾ ವೈರಾಣುವಿನ ಅಧ್ಯಯನ ನಡೆಸಲು ಅವಕಾಶ., ಮುಂತಾದುವುಗಳು ಇದರಲ್ಲಿ ಸೇರಿದೆ.

ಮಾನವೀಯತೆಯ ಆಧಾರದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುವವರು ಈಗಾಗಲೇ ಇಂಗ್ಲೆಂಡ್ ಸರಕಾರದ ಆಹ್ವಾನಕ್ಕೆ ಓಗೊಟ್ಟಿದ್ದಾರೆ. ದಕ್ಷಿಣಾಫ್ರಿಕಾ ಸರಕಾರ ಎಬೋಲಾದಿಂದ ಅಕ್ಷರಶಃ ನಲುಗಿ ಹೋಗಿದ್ದು, ತನ್ನ ಸರಕಾರ ಸಂಶೋಧಾನಾತರ್ಿಗಳಿಗೆ ವಿಶೇಷಭದ್ರೆತೆ ಒದಗಿಸುವ ಬಗ್ಗೆ ಅದರ ನಿದೇರ್ಶಕ ಜೆರೆಮಿ ಫರಾರ್ ಮಾಹಿತಿ ಒದಗಿಸಿದ್ದಾರೆ.
ಇದರೊಂದಿಗೆ ಆಫ್ರಿಕಾ ಸರಕಾರ 40 ಮಿಲಿಯನ್ ಪೌಂಡ್ಸ್ ಮೀಸಲಿರಿಸಿದೆ. ಪ್ರತೀ 40 ನಿಮಿಷಕ್ಕೊಬ್ಬರಂತೆ ಎಬೋಲಾ ಸೋಂಕು ಒಬ್ಬರಿಗೊಬ್ಬರು ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಎಬೊಲಾ ವೈರಾಣುವನ್ನು ಕೊಲ್ಲುವ ಔಷಧಿ ಕಂಡುಹಿಡಿಯುತ್ತಿದೆ.
ಈಗಾಗಲೇ ಇದು 30 ಸಾವಿರ ಮಂದಿಗೆ ಸೋಂಕಿದ್ದು, ಆಫ್ರಿಕಾದಲ್ಲಿಯೇ ಬರೋಬ್ಬರಿ 1300 ಮಂದಿ ಅಸುನೀಗಿದ್ದಾರೆ.
