Published On: Thu, Aug 21st, 2014

ಓ ಬಾಲ್ಯವೇ ಮತ್ತೆ ಮತ್ತೆ ಕಾಡುತ್ತಿರು…

ಸುದ್ದಿ9ವಿಶೇಷ: ಬಾಲ್ಯ ಪ್ರತಿಯೊಬ್ಬರಲ್ಲೂ ಹರ್ಷ ಉಂಟುಮಾಡುವ ಘಟನೆ. ಬಾಲ್ಯದಲ್ಲಿ ಮಾಡಿದ ರಂಪಾಟ, ಗೆಳೆಯರ ಜೊತೆ ಆಡಿಕೊಂಡಿದ್ದು, ಅಜ್ಜಿಯ ಮಡಿಲಲ್ಲಿ ರಂಪಾಟಹೊಡೆದಿದ್ದು, ಶಾಲೆಗ ಹೋಗುವುದಿಲ್ಲ ಎಂದು ಗುಡ್ಡ, ಮರ ಹತ್ತಿ ಕುಳಿತಿದ್ದು ಎಲ್ಲವನ್ನೂ ಹಾಗೆಯೇ ಮನಸ್ಸಿನಲ್ಲಿ ಜ್ಞಾಪಿಸಿಕೊಳ್ಳಿ… ಎಷ್ಟು ಹಿತವಾಗಿರುತ್ತದಲ್ವಾ? ಅದೇ ರೀತಿ ನಿಮ್ಮ ಬಾಲ್ಯದ ಗೆಳೆಯ ನಿಮ್ಮ ಕಣ್ಣೆದುರೇ ದುರ್ಮರಣಕ್ಕೀಡಾಗಿರುವ ಘಟನೆಯೂ ಕೂಡಾ ಕಣ್ಣಂಚಿನಲ್ಲಿ ನೀರು ತರಿಸುತ್ತದೆ.

old is gold (21)

old is gold

old is gold (1)

old is gold (2)

old is gold (3)

old is gold (5)

old is gold (6)

old is gold (7)

old is gold (8)

old is gold (9)

old is gold (11)

old is gold (12)

old is gold (13)

old is gold (14)

old is gold (15)

old is gold (16)

old is gold (17)

old is gold (18)

old is gold (20)

old is gold (22)

old is gold (23)

 
ಪ್ರತಿಯೋರ್ವರಿಗೂ ಬಾಲ್ಯ ಎಂಬುದು ಅವಿಸ್ಮರಣೀಯ ಅನುಭವ. ಯಾವ ಚಿಂತೆಯೂ ಇಲ್ಲದೆ ನಮ್ಮದೇ ವಿಚಿತ್ರಲೋಕದಲ್ಲಿ ವಿಹರಿಸುತ್ತಾ ಕಾಲಕಳೆಯುತ್ತಿದ್ದ ಆ ಬಾಲ್ಯದ ದಿನಗಳು ಮತ್ತೆಂದೂ ಬರದು.
ನಿಮಗೆ ನೆಬನಪಿಗೆ ಬರಬಹುದು. ಹೆಣ್ಣುಗಂಡು ಒಟ್ಟಾಗಿ ಕಬ್ಬಡ್ಡಿ ಆಡಿದ್ದು, ಎರಡು ಕಡೆ ಕಲ್ಲುಗಳನ್ನು ಇಟ್ಟು, ಕೊತ್ತಳಿಗೆ ಬ್ಯಾಟ್ ಹಿಡಿದು ಕ್ರಿಕೆಟ್ ಆಡುತ್ತಿದ್ದಾಗ ಆಗಾಗ ಚಡ್ಡಿ ಜಾರುವುದು ಹು… ಕಿಸಕ್ಕನೆ ನಗು ತರಿಸುತ್ತದಲ್ವಾ? ನಿಮ್ಮ ಬಾಲ್ಯದ ಗೆಳತಿ ಬೆನ್ನು ಹರಿದಿರುವ ಮಿಡಿ ಹಾಕಿಕೊಂಡಿರುತ್ತಾಳೆ, ಆಗ ನಾವು ಆಕೆಯ ಬೆನ್ನಿಗೆ ದಫದಫ ಗುದ್ದಿದ ನೆನಪು ಬರುತ್ತಿಲ್ವಾ? ಆಕೆ ಎಷ್ಟು ಅತ್ತಿದ್ದಳ್ವಾ? ಈಗ ಆಕೆ ತನ್ನ ಗಂಡನೊಂದಿಗೆ ಮಕ್ಕಳನ್ನು ಕಟ್ಟಿಕೊಂಡು ಹೋಗುವಾಗ ಆ ನೆನಪು ಸಣ್ಣಗೆ ಬಂದು ಹೋಗುತ್ತದೆ.
ಬೇರೆಯವರ ಮನೆಯ ಗುಜ್ಜೆ ಕದ್ದದ್ದು, ತಿಂಡಿ ಕದ್ದದ್ದು, ನೆರೆಮನೆಯ ಹುಡುಗಿಯ ಕೂದಲು ಕಟ್ ಮಾಡಿದ್ದು ಎಲ್ಲವೂ ಈಗ ನಗುವ ಸರಕುಗಳು. ಅಷ್ಟೂ ಅಲ್ಲದೆ ಯಾವುದೋ ಒಂದು ಜೋಡಿ ಗುಡ್ಡೆಯಲ್ಲಿ ಸಿಕ್ಕಿಬಿದ್ದು, `ನಾವು ಆಟ ಆಡ್ತಿದ್ದೆವು, ಈ ವಿಷ್ಯ ಯಾರಿಗೂ ಹೇಳ್ಬೇಡಿ’ ಅಂತ ಹೇಳಿ ಚಾಕಲೇಟ್ ಕೊಟ್ಟಿದ್ದು ನೆನಪಿಗೆ ಬಂದಾಗ ನಗುವೋ, ಅಸಹ್ಯವೋ ಏನೋ ಒಂದು ಭಾವ ಮನಸ್ಸಲ್ಲಿ ಬಂದುಹೋಗುತ್ತದೆ.
ಅಷ್ಟಕ್ಕೂ ನಮ್ಮಂತಹಾ ನಾಲ್ಕು ಜನ ಹುಡುಗ ಹುಡುಗಿಯರ ಪಟಲಾಂ ಕಟ್ಟಿಕೊಂಡು ಇಡೀ ಊರಿಗೆ ಸೆಡ್ಡು ಹೊಡೆಯುವಂತೆ ತಿರುಗಾಡುವುದು, ನೆರೆಮನೆಯ ಹೆಂಗಸರೆಲ್ಲಾ ನಮಗೆ ಬಯ್ಯುವುದು ನೆನೆದಾಗ ಈಗಲೂ ಆ ಹೆಂಗಸನ್ನು ನೋಡುವಾಗ ತಿಂದು ಬಿಡುವ ಸಿಟ್ಟು ಬರುತ್ತದಾ? ಖಂಡಿತಾ ಇಲ್ವಲ್ಲಾ?
ನಾವು ಹಿಂದೆ ಸಂಗ್ರಹಿಸಿಡುತ್ತಿದ್ದ ಬಳಪದ ಕಡ್ಡಿಗಳು, ಬಣ್ಣಬಣ್ಣದ ಗೋಲಿಗಳು, ಬಳೆಗಳ ಚೂರುಗಳು, ಗುಗರ್ುಂಜಿಕಾಯಿ ಈಗಲೂ ನಮ್ಮ ನೆನಪಿನ ಬುತ್ತಿಯಲ್ಲಿ ಹಾಗೆ ಬಂದು ಹೀಗೆ ಹೋಗುತ್ತದೆ. ಅಂಗಡಿಯಾಟ, ಮದುವೆಯಾಟ, ಅಪ್ಪಅಮ್ಮ ಆಟ ಆಡಿದ್ದ ನೆನಪು ಈಗ ಕೇವಲ ನೆನಪಷ್ಟೇ.
ನೇಮ, ಕೋಲ, ಬಲಿ ಉತ್ಸವ ನೋಡಿ ಬಂದು ಅದರಂತೆಯೇ ಅನುಕರಣೆ ಮಾಡಿ ಪೆಟ್ಟು ತಿಂದಿದ್ದ ನೆನಪು ಈಗಂತೂ ಅದನ್ನೇ ಹೇಳಿ ಹೇಳಿ ಜೋಕ್ ಮಾಡಬಹುದು. ಗುಡ್ಡದಲ್ಲಿ ಅಲೆದಾಡುತ್ತಾ, ಕಂಡರ್ೆಹುಳಿ, ಬೊಲರಾ ಹಣ್ಣು, ಕುಂಟಾಲ ಹಣ್ಣು ತಿನ್ನುತ್ತಿದ್ದೆವು. ಆದರೆ ಈಗಂತೂ ಅವು ಕಣ್ಣಿಗೇ ಸಿಗುವುದಿಲ್ಲ.
ಲ್ಯಾಂಪ್, ಚಿಮಿಣಿ ದೀಪ ಈಗ ಎಲ್ಲಿ ಮಾಯವಾಗಿದೆಯೋ ಗೊತ್ತಿಲ್ಲ. ಚಿಮಿಣಿ ಬುಡ್ಡಿಯ ಸೀಮೆಎಣ್ಣೆಯ ದಪ್ಪ ಹೊಗೆ, ಅದರಲ್ಲೇ ಓದಿ ಎಸ್ಎಸ್ಎಲ್ಸಿ ಪಾಸ್ ಮಾಡಿದ್ದು, ಕೆಲವೊಂದು ಹಿರಿಯರಿಗೆ ಈಗಲೂ ದೊಡ್ಡ ಸಾಧನೆಯ ವಿಷಯ. ಟ್ಯೂಬ್ಲೈಟ್ನಷ್ಟು ಬೆಳಕು ಕೊಡುವ ಪೆಟ್ರೋಮಾಕ್ಸ್ ದೀಪ ಎಲ್ಲೋಗಿದೆಯೇ? ಅದರ ಬತ್ತಿಗೆ ಕೈ ಹಾಕಿ ಹುಡಿ ಮಾಡಿ ಪೆಂಗಣ್ಣನಂತೆ ಅಟ್ಟದಲ್ಲಿ ಕೂತವರಿಗೆ ಗೊತ್ತು ಪೆಟ್ರೋಮ್ಯಾಕ್ಸ್ ಲೈಟಿನ ಮನ ಏನೆಂದು?
ಕುಟ್ಟಿದೊಣ್ಣೆ ಆಟವಾಡಿ ಗಿಳಿ ಹೊಡೆದಿದ್ದು, ಮರಾಮುರಿ ಆಟದದಲ್ಲಿ ಹುಡುಗಿಯರನ್ನು ಅಟ್ಟಿಸಿ ಹೊಡೆದಿದ್ದು ಎಲ್ಲವೂ ಈಗ ನೆನಷ್ಟೆ. ಈಗಿನ ಹೈಫೈ ಮಕ್ಕಳಿಗೆ ಇದೆಲ್ಲಾ ಗೊತ್ತಿಲ್ಲ, ಕಂಪ್ಯೂಟರ್ ಮೊಬೈಲ್ ಮೂಲಕ ಆಟವಾಡ್ತಾ, ರಿಮೋಟ್ ಕಂಟ್ರೋಲ್ನಿಂದ ಕಾರ್ ವಿಮಾನ ಬಿಡುವ ಮಕ್ಕಳು ನಿಜವಾಗಿಯೂ ನಮ್ಮಂತಹಾ ಬಾಲ್ಯದ ಸುಖ ಜೀವನದಿಂದ ಖಂಡಿತಾ ವಂಚಿತರು.
ಓ ಬಾಲ್ಯವೇ ಮತ್ತೆ ಮತ್ತೆ ಕಾಡುತ್ತಿರು…
-ಗಿರಿ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter