IMG-20180312-WA0718-225x300

ದಾವಣಗೆರೆ: ಖಾಸಗಿ ಬಸ್ ಹಾಗೂ ಬೈಕ್ ನಡುವೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಸೋಮವಾರ ದಾವಣಗೆರೆ ತಾಲೂಕು ಎಲೆ ಬೇತೂರು ಗ್ರಾಮದಲ್ಲಿ ಸಂಭವಿಸಿದೆ.

ಶಿವಮೊಗ್ಗದ ಹರಮಘಟ್ಟ ಗ್ರಾಮದ ನಿವಾಸಿ ಶಶಿಧರ್(24) ಮೃತ ಬೈಕ್ ಸವಾರ. ಮಹದೇವ ಎಂಬ ಹೆಸರಿನ ಖಾಸಗಿ ಬಸ್ ಚಾಲಕ  ಅತೀ ವೇಗದಲ್ಲಿ ಬಂದು ಬಸ್ ನಿಯಂತ್ರಿಸಲಾಗದೆ ಬೈಕ್ ಗೆ ಡಿಕ್ಕಿ ಹೊಡೆದಿದೆ. ಘಟನೆ ಬಳಿಕ ಬಸ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.

ಸ್ಥಳಕ್ಕೆ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

By Suddi9

Leave a Reply

Your email address will not be published. Required fields are marked *