ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯನೇ ಸೂಪರ್ ಸಿಎಂ ಆಗಿದ್ದು, ಕೆಂಪಯ್ಯನ ಅಣತಿಯಂತೆ ಸರ್ಕಾರ ನಡೆಯುತ್ತಿದೆ. ಹೀಗಾಗಿ ರಾಜ್ಯದಲ್ಲಿ ಅರಾಜಕತೆ ಹೆಚ್ಚಾಗಲು ಕಾರಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಟೀಕಿಸಿ.
ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿ ಬಿಜೆಪಿ ಜನಶಕ್ತಿ ಸಭೆಯಲ್ಲಿ ಭಾಗವಹಿಸಲು ಮಂಗಳವಾರ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಸರ್ಕಾರದಲ್ಲಿ ಕರ್ನಾಟಕ ಗೂಂಡಾ ಹಾಗೂ ರಾಕ್ಷಸಿ ರಾಜ್ಯವಾಗಿದೆ. ಮಹಿಳೆಯರಿಗೆ ಸುರಕ್ಷತೆ ಇಲ್ಲ, ಅತ್ಯಾಚಾರ, ಕೊಲೆ ಸುಲಿಗೆ ದರೋಡೆಗಳು ಹೆಚ್ಚಿದೆ. ರಾಜ್ಯದಲ್ಲಿ ಲೋಕಾಯುಕ್ತ ನ್ಯಾಮೂರ್ತಿಗಳಿಗೂ ರಕ್ಷಣೆ ಇಲ್ಲದೆ ಅವರಿಗೆ ಚೂರಿ ಹಾಕಿ ಹತ್ಯೆಗೆ ಯತ್ನ ನಡೆಸಿದ್ದು, ಕರ್ನಾಟಕ ಎಷ್ಟು ಗೂಂಡಾ ಹಾಗೂ ರಾಕ್ಷಸಿ ರಾಜ್ಯವಾಗಿದೆ ಎಂಬುದು ಸಾಮಾನ್ಯ ಜನರಿಗೆ ತಿಳಿದಿದೆ.
ಕಾಂಗ್ರೆಸ್ ಆಡಳಿತಾವಧಿಯಲ್ಲಿ ದಕ್ಷ ಅಧಿಕಾರಿಗಳಿಗೆ ರಕ್ಷಣೆ ಇಲ್ಲವಾಗಿದ್ದು, ತಮ್ಮ ದುರಾಡಳಿತ ಕೆಲಸಕ್ಕಾಗಿ ಐಪಿಎಸ್, ಐಪಿಎಸ್ ಅಧಿಕಾರಿಗಳನ್ನು ಅವಧಿ ಪೂರ್ಣ ಎತ್ತಂಗಡಿ ಮಾಡುತ್ತಿರುವದು ದಕ್ಷ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಸಿಯುತ್ತಿದೆ ಎಂದ ಅವರು, ಕೊಪ್ಪಳ ಎಸ್ಪಿ ಅನೂಪ್ ಶೆಟ್ಟಿ ಕೂಡ ಒಬ್ಬ ದಕ್ಷ ಅಧಿಕಾರಿಯಾಗಿ ಅನೇಕ ಸುಧಾರಣಾ ಕ್ರಮಗಳ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದ್ದರು.
ಆದರೆ ಅವರ ಅವಧಿಪೂರ್ಣ ಎತ್ತಂಗಡಿ ಮಾಡಿದ್ದು, ಸರಿಯಲ್ಲ. ತಮ್ಮ ಅಕ್ರಮಗಳನ್ನು ಮುಚ್ಚಿಕೊಳ್ಳಲು ಜಿಲ್ಲೆಯ ಶಾಸಕರಾದ ರಾಘವೇಂದ್ರ ಹಿಟ್ನಾಳ, ಇಕ್ಬಾಲ್ ಅನ್ಸಾರಿ ಮತ್ತು ಶಾಸಕ ಶಿವರಾಜ ತಂಗಡಗಿ ಅಕ್ರಮ ಚಟುವಟಿಕೆಯಲ್ಲಿ ತೋಡಗಿಕೊಂಡಿದ್ದಾರೆ. ಆದ್ದರಿಂದ ತಮ್ಮ ಎಸ್ಪಿ ವರ್ಗಾವಣೆಗೆ ಲಾಭಿ ನಡೆದಿದೆ ಎಂದು ಆರೋಪಿಸಿದ ಅವರು, ರಾಮಲಿಂಗ ರೆಡ್ಡಿ ಗೃಹ ಇಲಾಖೆ ನಿರ್ವಹಿಸಲು ನಾಲಾಯಕ್ ಆಗಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳಿನ ಸರದಾರರು, ಚುನಾವಣೆ ಮತಕ್ಕಾಗಿ ಅನೇಕ ಯೋಜನೆಗಳನ್ನು ಘೋಷಿಸುವುದು ಹಾಗೂ ತಾಲೂಕ ರಚನೆ ಮಾಡಿದ್ದಾವೆ ಎಂದು ಹೇಳುತ್ತಾರೆ. ಆದರೆ ಹೊಸ ತಾಲೂಕಿಗೆ ಇನ್ನು ಅಧಿಕಾರಿಗಳ ನಿಯೋಜನೆ ಮಾಡದೆ, ಕೇವಲ ತಾಲೂಕು ಕಚೇರಿ ತೆರೆದು ವಾಪಾಸ್ ಮುಚ್ಚಿದ್ದಾರೆ. ಇದರಿಂದ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ಮತ ಪಡೆಯುವ ಸಂಚಾಗಿದೆ ಎಂದು ಆರೋಪಿಸಿದರು.

