ಮಂಡ್ಯ: ನನಗೆ ಟಿಕೆಟ್ ಇನ್ನೂ ಅಂತಿಮವಾಗಿಲ್ಲ. ಆದ್ದರಿಂದ ನಾನಿನ್ನೂ ಪ್ರಚಾರ ಆರಂಭಿಸಿಲ್ಲ. ನನಗೆ ಟಿಕೆಟ್ ಕೊಡದಿದ್ರೆ ಸಂತೋಷ, ಬೇಜಾರು ಮಾಡ್ಕೊಳ್ಳೋಕೆ ಆಗುತ್ತಾ? ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೆ ಪಕ್ಷದ ಅಭ್ಯರ್ಥಿ ಗೆಲುವಿಗೆ ದುಡಿಯುವೆ ಎಂದು ಶಾಸಕ, ನಟ ಅಂಬರೀಷ್ ಹೇಳಿದ್ದಾರೆ.
ಅವರು ಇಂದು ಮಂಡ್ಯ ನಗರದಲ್ಲಿರುವ ಅಮರಾವತಿ ಚಂದ್ರಶೇಖರ್ ನಿವಾಸದಲ್ಲಿ ಈ ಸುದ್ದಿಗಾರರ ಜೊತೆಗೆ ಮಾತನಾಡಿದರು, ಇದೇ ವೇಳೆ ಅವರು ಮಾತನಾಡಿ ನನಗೆ ಟಿಕೆಟ್ ಕೊಡಬೇಕೋ ಬೇಡವೋ ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ಹೈಕಮಾಂಡ್ ಬೇರೆಯವರಿಗೆ ಅವಕಾಶ ಮಾಡಿಕೊಡಿ ಎಂದರೆ ಕ್ಷೇತ್ರ ಬಿಟ್ಟು ಹೋಗಲು ನಾನು ಸಿದ್ಧ. ಸಿದ್ದರಾಮಯ್ಯ, ಪರಮೇಶ್ವರ್ ಕೈಯಲ್ಲಿ ನನ್ನ ಟಿಕೆಟ್ ಇಲ್ಲ. ಕಾಂಗ್ರೆಸ್ ನಲ್ಲಿ ಸೋನಿಯಾ, ರಾಹುಲ್, ಕೈನಲ್ಲಿದೆ ಎಂದು ತಿಳಿಸಿದರು.

