07-KPL-05-300x169

ಕೊಪ್ಪಳ: ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಇದ್ದರೂ ಅದು ಕೊಲೆಗಡುಕರ ಸರ್ಕಾರವಾಗಿದೆ, 10 ಜನ್ಮ ಎತ್ತಿ ಬಂದರೂ ಆರ್ ಎಸ್ ಎಸ್ ನ್ನು ಏನು ಮಾಡೋಕೆ ಆಗೊಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ರಾಜ್ಯ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಲಿ ಸೋಲು ಖಚಿತ, ಸಿದ್ದರಾಯ್ಯ ದೇವೇಗೌಡರಿಗೆ ಟೋಪಿ ಹಾಕಿ ಕಾಂಗ್ರೆಸ್ ಗೆ ಬಂದಿರುವ ಇವರಿಗೆ ಕೊಲೆಗಡುಕರೊಂದಿಗೆ ನೇರ ಸಂಪರ್ಕವಿದೆ. ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಜೀವಂತ ದಾಖಲೆ ಎಂದರೆ ಅಶೋಕ ಖೇಣಿ ಒಂದು ದೊಡ್ಡ ಸಾಕ್ಷಿಯಾಗಿದ್ದು, ಇದು ಕಾಂಗ್ರೆಸ್ ನವರ ಭ್ರಷ್ಟಾಚಾರದ ಇನ್ನೂಂದು ಮುಖವಾಗಿದೆ.

ರಾಜ್ಯ ಈಗ ಕೊಲೆಗಡುಕರು, ಗುಂಡಾಗಳು, ಅತ್ಯಾಚಾರಿಗಳ ಸ್ವರ್ಗವಾಗಿದೆ. ಸಧ್ಯ ರಾಜ್ಯದಲ್ಲಿನ ಪರಿಸ್ಥಿತಿ ನೋಡಿದ್ರೆ ಮುಖ್ಯಮಂತ್ರಿಗಳ ಕೊಲೆಯು ಆಗಬಹುದು, ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರದ ನೆರವು ಪಡೆಯಬೇಕೆಂದು ಅವರು ಯಡಿಯೂರಪ್ಪನವರ ಮೇಲೆ ಯಾವುದೇ ಕೇಸ್ ಇಲ್ಲ.. ಆದರೂ ಜೈಲಿಗೆ ಹೋಗಿ ಬಂದವರು ಎಂದು ಹೇಳುವ ಸಿದ್ದರಾಮಯ್ಯ ಬ್ರಷ್ಟಾಚಾರಕ್ಕೆ ಬೆಂಬಲ ಕೊಡಲು ಮೊದಲನೇ ಸ್ಥಾನದಲ್ಲಿದ್ದಾರೆ.

ಹಿಂದುಳಿದ ವರ್ಗದ ನಕಲಿ ನಾಯಕ ಸಿದ್ದರಾಮಯ್ಯ : ಸಿದ್ದರಾಮಯ್ಯ ದಲಿತರನ್ನು ಹಿಂದುಳಿದವರನ್ನ ಮರೆತಿದ್ದಾರೆ ಅವರಿಗೆ ಮನೆ ಕೊಟ್ಟಿಲ್ಲ, ಸಂಗೊಳ್ಳಿ ರಾಯಣ್ಣ ಕರ್ಮಭೂಮಿಗೆ ಕಾಲಿಡದ ಸಿದ್ದರಾಮಯ್ಯ ಹಿಂದುಳಿದ ವರ್ಗದ ನಕಲಿ ನಾಯಕೆಂದು ಗುಡಿಗಿದರು. ಕೇಂದ್ರದ ಗೃಹ ಸಚಿವರರಿಗೆ ನನ್ನ ರಕ್ಷಣೆಗೆ ನೆರವಿಗೆ ಬನ್ನಿ ಎಂದು ಸಿಎಂ ಮನವಿ ಮಾಡಬೇಕಾದ ವಾತಾವರಣ ಸೃಷ್ಠಿಯಾಗಿದೆ,

ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರ ಕೊಲೆಗೆ ಯತ್ನ ನಡೆದಿದೆ, ಹಾಗಾಗಿ ಸಿಎಂ ಕೇಂದ್ರದ ನೆರವು ಪಡೆದು ಸಿದ್ದರಾಮಯ್ಯ ತಮ್ಮ ಜೀವವನ್ನಾದರೂ ಉಳಿಸಿಕೊಳ್ಳಬೇಕು.

ಹ್ಯಾರಿಸ್ ಪುತ್ರ ನಲಪಾಡ್ ವಿದ್ವತ್ ಮೇಲೆ ಹಲ್ಲೆ ಮಾಡಿದ್ದ ಸಿದ್ದರಾಮಯ್ಯನ ಶಿಷ್ಯ ನಾರಾಯಣಸ್ವಾಮಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ಪೆಟ್ರೋಲ್ ಹಾಕಿ ಬೆಂಕಿ ಹಚ್ಚುವ ಬೆದರಿಕೆ ಹಾಕಿದೆ. ಕೊಲೆಗಡುಕರು, ಅತ್ಯಾಚಾರಿಗಳಿಗೆ ಪೊಲೀಸ್, ಸರ್ಕಾರದ ಭಯವಿಲ್ಲದಾಗಿದೆ ಎಂದು ಆರೋಪಿಸಿದರು.

ಅಶೋಕ ಖೇಣಿ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು ಸದನ ಸಮಿತಿ ಅಧ್ಯಕ್ಷರಾಗಿ, ಕಾನೂನು ಸಚಿವ ಜಯಚಂದ್ರ ಅವರು ನೈಸ್ ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ವರದಿ ನೀಡಿದ್ದರು, ಆದಾಗ್ಯೂ ಖೇಣಿಯನ್ನು ಕಾಂಗ್ರೆಸ್ ಸೇರ್ಪಡೆ ಮಾಡಿಕೊಂಡು ಭ್ರಷ್ಟಾಚಾರವನ್ನು ಅಪ್ಪಿಕೊಂಡಿದ್ದಾರೆ. ಯಡಿಯೂರಪ್ಪ ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಸಿದ್ರಾಮಯ್ಯ ಹೇಳ್ತಾರೆ. ಆದರೆ ಯಡಿಯೂರಪ್ಪ ಮೇಲಿನ ಎಲ್ಲ ಕೇಸ್ ಗಳು ಡಿಸ್ಮಿಸ್ ಆಗಿವೆ. ಎಲ್ಲ ಹಿಂದುಳಿದ ಸಮಾಜಕ್ಕೆ ನೀವೆಷ್ಟು ದುಡ್ಡು ಕೊಟ್ರಿ ಹೇಳಿ ಎಂದು ಪ್ರಶ್ನಿಸಿದರು

ಮಾ. ೧೦ ರಂದು ಕೂಡಲ ಸಂಗಮದಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ನಡೆಯಲಿದ್ದು, ಉತ್ತರ ಕರ್ನಾಟಕದ ೧೦ ಜಿಲ್ಲೆಗಳ ಹಿಂದುಳಿದ ವರ್ಗಗಳ ಕಾರ್ಯಕರ್ತರು ಭಾಗವಹಿಸಲಿದ್ದಾರೆ, ಈ ಸಮಾವೇಶಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬರಲಿದ್ದಾರೆ. ಮಾ.೨೫ ಕಾಗಿನೆಲಯಲ್ಲಿ ಉಳಿದ ಎಲ್ಲ ಜಿಲ್ಲೆಗಳ ಸಮಾವೇಶ ನಡೆಯಲಿದೆ. ಬಿಜೆಪಿಯಲ್ಲಿ ಮೂರು ಅಂಶಗಳನ್ನು ಗಮನಿಸಿ ಪಕ್ಷದ ವರಿಷ್ಠರು ಟಿಕೆಟ್ ಕೊಡ್ತಾರೆ. ನಾನು ಶಿವಮೊಗ್ಗ ಬಿಟ್ಟು ಎಲ್ಲೂ ಹೋಗೋದಿಲ್ಲವೆಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ, ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ, ಸಿ.ವಿ.ಚಂದ್ರಶೇಖರ್ ಸೇರಿದಂತೆ ಹಲವು ಮುಖಂಡು ಉಪಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *