Image result for cm siddaramaiah

ಬೆಂಗಳೂರು: ಬಿಜೆಪಿ ನಾಯಕರಿಗೆ ಸಭ್ಯತೆ, ಸಂಸ್ಕೃತಿ, ಮನುಷ್ಯತ್ವ ಯಾವುದೂ ಇಲ್ಲ. ಬಳಸುವ ಭಾಷೆ ಬಗ್ಗೆ ಪರಿಜ್ಞಾನವೇ ಅವರಿಗಿಲ್ಲ ಎಂದು ಸಚಿವ ಅನಂತ್ ಕುಮಾರ್  ಹೆಗ್ಡೆ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ಧಾರೆ.

ಗೃಹ ಕಚೇರಿ ಕೃಷ್ಣದಲ್ಲಿ ಬುಧವಾರ ಪ್ರತಿಕ್ರಿಯೆ ನೀಡಿದ ಸಿಎಂ, ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್, ಅನಂತ್ ಕುಮಾರ್ ಹೆಗಡೆ ಇಂಥವರಿಗೆಲ್ಲಾ ಬಳಸುವ ಭಾಷೆಯ ಪರಿಜ್ಞಾನವಾಗಲಿ, ಸಂಸ್ಕೃತಿ, ಸಂಸ್ಕಾರವಾಗಲೀ ಇಲ್ಲ. ನಾಯಕರನ್ನು ಮೆಚ್ಚಿಸುವುದಕ್ಕಾಗಿ ಕೀಳುಮಟ್ಟದಲ್ಲಿ ಮಾತನಾಡುತ್ತಿದ್ದು, ಇದು ಅವರ ಯೋಗ್ಯತೆ ತೋರಿಸುತ್ತದೆ ಎಂದು ಟೀಕಿಸಿದರು.

ಉಡುಪಿಗೆ ಬಂದರ ಬಡಿಗೆಯಿಂದ ಬಡಿಯುತ್ತೇವೆ ಎಂದು ಶೋಭಾ ಹೇಳಿದ್ದಾರೆ. ಒಬ್ಬ ಸಂಸದೆಯ ಸಂಸ್ಕೃತಿ ಇದೆಯಾ? 40 ವರ್ಷಗಳಿಂದ ರಾಜಕಾರಣದಲ್ಲಿ ಇರುವ ನಾನು ಯಾವತ್ತೂ ರಾಜಕೀಯ ವಿರೋಧಿಗಳ ವಿರುದ್ಧ ಇಂತಹ ಭಾಷೆ ಬಳಸಿಲ್ಲ ಎಂದರು.

By suddi9

Leave a Reply

Your email address will not be published. Required fields are marked *