duster-2012-2015

ಕಾರು ಪ್ರಿಯರಿಗೆ ಖುಷಿ ಸುದ್ದಿ ಇದೆ. ರೆನಾಲ್ಟ್ ಇಂಡಿಯಾ ಕಂಪನಿ ತನ್ನ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್, ರೆನಾಲ್ಟ್ ಡಸ್ಟರ್ ಬೆಲೆಯಲ್ಲಿ ಭಾರೀ ಕಡಿತ ಮಾಡಿದೆ. ಡಸ್ಟರ್ ಕಾರಿನ ಬೆಲೆ 29,746 ರೂಪಾಯಿಯಿಂದ 1,00,761 ರೂಪಾಯಿವರೆಗೂ ಕಡಿಮೆಯಾಗಲಿದೆ.

ಪರಿಷ್ಕೃತ ದರದ ಅನ್ವಯ ರೆನಾಲ್ಟ್ ಡಸ್ಟರ್ ಪೆಟ್ರೋಲ್ ಕಾರಿನ ಬೆಲೆ 7.95-9.95 ಲಕ್ಷ ರೂಪಾಯಿ. ಮೊದಲು 8.5-10.25 ಲಕ್ಷ ರೂಪಾಯಿ ಇತ್ತು. 9.45-13.79 ಲಕ್ಷ ರೂಪಾಯಿ ಇದ್ದ ಡೀಸೆಲ್ ಕಾರಿನ ಬೆಲೆ ಈಗ 8.95-12.79 ಲಕ್ಷ ರೂಪಾಯಿ ಆಗಿದೆ.

ಕ್ವಿಡ್ ಕಾರನ್ನು ಭಾರತದಲ್ಲಿ ಲಾಂಚ್ ಮಾಡಿದ ಬಳಿಕ ಕಂಪನಿ ಉತ್ತಮ ವಹಿವಾಟು ನಡೆಸಿದೆಯಂತೆ. ಇದರ ಪ್ರಯೋಜನ ಡಸ್ಟರ್ ಖರೀದಿದಾರರಿಗೆ ಸಿಗ್ತಿದೆ ಅಂತಾ ಸಿಇಓ ಸುಮಿತ್ ತಿಳಿಸಿದ್ದಾರೆ. ಇನ್ನಷ್ಟು ಗ್ರಾಹಕರನ್ನು ಆಕರ್ಷಿಸಲು ಬೆಲೆ ಇಳಿಕೆ ಮಾಡಲಾಗಿದೆ.

By suddi9

Leave a Reply

Your email address will not be published. Required fields are marked *