39d7829e94b8e6721e2a9b20607368fb

ಹೊಸದಿಲ್ಲಿ: ಬೈಕ್ ನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಯುವಕನೋರ್ವನ್ನು ತಡೆದು 50 ಬಾರಿ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ ದಾರುಣ ಘಟನೆ ಇಲ್ಲಿನ ಖಾನಾಪುರ ಪ್ರದೇಶದಲ್ಲಿ ಗುರುವಾರ ನಡೆದಿದೆ.

 ಆಶಿಶ್ ಇರಿತಕ್ಕೊಳಗಾದ ಯುವಕ ಎಂದು ಗುರುತಿಸಲಾಗಿದೆ.

 ಆಶಿಶ್ ಜಿಮ್ ನಿಂದ ಮರಳುತ್ತಿದ್ದ ವೇಳೆ ದುಷ್ಕರ್ಮಿಗಳು ಬೈಕ್ ನಲ್ಲಿ ಬಂದು ಆತನನ್ನು ತಡೆದು 50 ಬಾರಿ ಇರಿದಿದ್ದು, ಈ ಬಗ್ಗೆ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಇನ್ನೂ ದಾಳಿಯಿಂದ ತೀವ್ರ ಗಾಯಗೊಂಡ ಆಶಿಶ್ ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಕರಣ ದಾಖಲಿಸಿರುವ ಪೊಲೀಸರು  ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಹೋಳಿ ಹಬ್ಬಕ್ಕೆ ಮುನ್ನ ನೀರಿನ ಬಲೂನ್ ಎಸೆದಿದ್ದ ಬಾಲಕನ ಮೇಲೆ ಕೆಲವು ವ್ಯಕ್ತಿಗಳು ಯದ್ದಾತದ್ವಾ ಹಲ್ಲೆ ನಡೆಸುತ್ತಿದ್ದುದನ್ನು ಕಂಡು ಆಶಿಶ್ ತಡೆದಿದ್ದು, ಘಟನೆಗೆ ಇದೇ ಕಾರಣಕ್ಕೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *