ಅಜೆಕಾರು: ಅಜೆಕಾರು ಹೋಬಳಿ 2 ನೇ ಕನ್ನಡ ಸಾಹಿತ್ಯ ಸಮ್ಮೇಳನ ಫೆಬ್ರವರಿ 24 ರಂದು ಶಿರ್ಲಾಲಿನ ನಾಲ್ಕೂರು ನರಸಿಂಗ ರಾವ್ ಸಂಯಕ್ತ ಪದವಿಪೂರ್ವ ಕಾಲೃಜಿನ ರಜತ ಮಹೋತ್ಸವ ಸಭಾಭವನದಲ್ಲಿ ನಡೆಯಿಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಜೆಕಾರು ಹೋಬಳಿ ಅಧ್ಯಕ್ಷ, ಹಿರಿಯ ಪತ್ರಕರ್ತ ಶೇಖರ ಅಜೆಕಾರು ತಿಳಿಸಿದ್ದಾರೆ.

ಅಜೆಕಾರು ಹೋಬಳಿಯ ಮೊದಲ ಸಾಹಿತ್ಯ ಸಮ್ಮೇಳನ ಎಣ್ಣೆಹೊಳೆಯಲ್ಲಿ ಮುನಿಯಾಲು ಗಣೇಶ ಶೆಣೈ ಅವರ ಅಧ್ಯಕ್ಷತೆಯಲ್ಲಿ ನಡೆದಿತ್ತು.
ಒಂದು ದಿನದ ಕಾರ್ಯಕ್ರಮದಲ್ಲಿ ಕವಿಗೋಷ್ಠಿ, ವಿಶೇಷ ಉಪನ್ಯಾಸಗಳು, ಸಾಧಕರಿಗೆ ಸನ್ಮಾನ ನಡೆಯಲಿದೆ.
“ಮಾತೇ ಕತೇ’ ವಿಶೇಷ ವಿಚಾರ ಮಂಡನೆಯ ಕಾರ್ಯಕ್ರಮದಲ್ಲಿ ಉಡುಪಿಯ ಅಪೂರ್ವ ಸಂಘಟಕ, ಸಾಹಿತಿ, ಕು.ಗೋ ಅವರು-” ಬದುಕು ಮತ್ತು ಹಾಸ್ಯ”, ಹಿರಿಯ ಕವಿ ಅಂಶುಮಾಲಿ ಅವರು ” ಕಾವ್ಯಾಸ್ವಾದನೆ ಹತ್ತು ಮುಖಗಳು ಮತ್ತು ಯುವ ಸಾಧಕ ಶಿಕ್ಷಕ ಗಣೇಶ ಜಾಲ್ಸೂರು ” ಯುವ ಜನತೆ ಮತ್ತು ಸಾಹಿತ್ಯ ಆಸಕ್ತಿ ಮತ್ತು ಪತ್ರಕರ್ತ ಡೊಂಬಯ್ಯ ಇಡ್ಕಿದು “ಮಾಧ್ಯಮ ಅವಕಾಶಗಳ ಆಗರ” ವಿಷಯದ ಕುರಿತು ಮಾತನಾಡಲಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 13 ಮಂದಿಯನ್ನು ಸಮ್ಮೇಳನದಲ್ಲಿ ಗೌರವಿಸಲಾಗುತ್ತದೆ.
ಎಣ್ಣೆಹೊಳೆ ಸಾಧು ಸದನ ಸಾಧು ಶೆಟ್ಟಿ ಮುಂಬಯಿ- ಸಮಾಜಸೇವೆ/ಉದ್ಯಮ/ಹೊರನಾಡ ಸೇವೆ, ಸುನಂದಮ್ಮ ಅಧಿಕಾರಿ ಅಜೆಕಾರು- ಮಹಿಳಾ ಸಾಧಕಿ, ಶಾಂತಿರಾಜ ಜೈನ್ ಶಿರ್ಲಾಲು- ಕಂಬಳ/ಸಮಾಜ ಸೇವೆ, ಎ.ಎನ್.ರತ್ನವರ್ಮ ಅಜೆಕಾರು- ಧಾರ್ಮಿಕ ಸೇವೆ, ಬಿ.ಕೆ.ರಮೇಶ್- ಸಂಘಟನೆ/ಸಮಾಜ ಸೇವೆ, ಹೆರ್ಮುಂಡೆ ಪ್ರವೀಣಿ ಸಾಲ್ಯಾನ್ ಮುಂಬಯಿ- ಶಿಕ್ಷಣ/ ಹೊರನಾಡ ಸೇವೆ, ಮುಕ್ತಾ ನಾಯಕ್ ಶಿರ್ಲಾಲು- ಶಿಕ್ಷಣ, ಉಪೇಂದ್ರ ನಾಯಕ್- ಕೃಷಿ, ವೈ.ದಾಮೋದರ ಆಚಾರ್ಯ ಎರ್ಲಪಾಡಿ- ಸಾಂಪ್ರದಾಯಿಕ ಕುಶಲ ಕಲೆ, ಭೋಜ ಪರಂಬರಬೆಟ್ಟು- ಭಜನೆ/ಧಾರ್ಮಿಕ ಸೇವೆ, ರಾಜು ಪಾಣಾರ ದೊಂಡರಂಗಡಿ- ಭೂತ ನರ್ತನ ಸೇವೆ, ವಿಶ್ವನಾಥ ಕೋಟ್ಯಾನ್ ಕಡ್ತಲ- ಛಾಯಾಗ್ರಹಣ, ಎ.ಆರ್. ಸತೀಶ ಆಚಾರ್ಯ ವರಂಗ- ನಾಟಕ ಸಾಹಿತ್ಯ ವಿಭಾಗಗಳ ಸಾಧನೆಗಾಗಿ ಗೌರವಕ್ಕೆ ಪಾತ್ರವಾಗಲಿದ್ದಾರೆ.
ಧರ್ಮದರ್ಶಿ ಹರಿಕೃಷ್ಣ ಪುನರೂರು, ಉಡುಪಿ ವಾಸುದೇವ ಭಟ್, ಗಣೇಶ ಕಾರ್ಣಿಕ್, ಮುನಿಯಾಲು ಉದಯ ಶೆಟ್ಟಿ, ರವೀಂದ್ರ ಶೆಟ್ಟಿ ಬಜಗೋಳಿ ಸಹಿತ ಗಣ್ಯರ ಸಮ್ಮುಖದಲ್ಲಿ ಗೌರವ ಪ್ರದಾನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *