images

ಸೋನಾರ್‌ಪುರ್‌: ಬರ್ತಡೇ ಪಾರ್ಟಿಯಲ್ಲಿ ಅಪ್ರಾಪ್ತ ಯುವತಿಗೆ ಮದ್ಯ ಕುಡಿಸಿ ಆಕೆಯ ಬಾಯ್ ಫ್ರೆಂಡ್ ಸೇರಿ ನಾಲ್ವರು ಅತ್ಯಾಚಾರ ಎಸಗಿದ ಘಟನೆ ಪಶ್ಚಿಮ ಬಂಗಾಳದ ಪರಗಣ ಜಿಲ್ಲೆಯಲ್ಲಿ ಮಂಗಳವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸಂತ್ರಸ್ತ ಯುವತಿ 12 ನೇ ತರಗತಿಯಲ್ಲಿ ಓದುತ್ತಿದ್ದು, ಆಕೆಯ ಬಾಯ್ ಫ್ರೆಂಡ್ ಬರ್ತಡೇ ಪಾರ್ಟಿಗೆ ತನ್ನ ಚಿಕ್ಕಪ್ಪನ ಮನೆಗೆ ಕರೆಸಿಕೊಂಡು ಸ್ನೇಹಿತರೊಂದಿಗೆ ಸೇರಿ ಅತ್ಯಾಚಾರ ಎಸಗಿ ಕೊಲೆ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ.

ಚಿಕ್ಕಪ್ಪನ ಮನೆಯವರು ಮದುವೆಗೆಂದು ಹೊರಗಡೆ ಹೋಗಿ ಮರಳಿ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.  ಘಟನೆಯಿಂದ ತೀವ್ರ ಅಸ್ವಸ್ಥಗೊಂಡಿದ್ದ ಯುವತಿಯನ್ನು ಚಿಕಿತ್ಸೆಗೆ ದಾಖಲಿಸಿ ಪೋಲಿಸರಿಗೆ ದೂರು ನೀಡಿದ್ದಾರೆ.

ಪೊಲೀಸರು ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದು, ಮತ್ತೊಬ್ಬ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಬಲೆ ಬೀಸಿದ್ದಾರೆ.

By Suddi9

Leave a Reply

Your email address will not be published. Required fields are marked *