sc3-kXCE--621x414@LiveMint

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನಾಳೆ ಸುಪ್ರೀಂಕೋರ್ಟ್ ಅಂತಿಮ ತೀರ್ಪು ಪ್ರಕಟಿಸಲಿದೆ.

ಕಾವೇರಿ ನ್ಯಾಯಾಧೀಕರಣದ ಐತೀರ್ಪು ಪ್ರಶ್ನಿಸಿ ಕರ್ನಾಟಕ ಮತ್ತು ತಮಿಳುನಾಡು ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಈ ವಿಶೇಷ ಮೇಲ್ಮನವಿಯನ್ನು ಅರ್ಜಿಯವಿಚಾರಣೆ 2016 ರ ಅಕ್ಟೋಬರ್ 18 ರಿಂದ ಆರಂಭವಾಗಿ 2017 ರ ಸೆಪ್ಟೆಂಬರ್ 20 ಕ್ಕೆ ವಿಚಾರಣೆ ಅಂತ್ಯವಾಗಿತ್ತು.

 ಅಂತಿಮ ಐತೀರ್ಪಿನಲ್ಲಿ ನ್ಯಾ. ಎನ್.ಪಿ.ಸಿಂಗ್ ನ್ಯಾ. ಸುಧೀರ್ ನಾರಿಯಮ್. ನ್ಯಾ. ಎನ್.ಎಸ್. ರಾವ್ ಅವರನ್ನು ಒಳಗೊಂಡ ಕಾವೇರಿ ನ್ಯಾಯಾಧಿಕರಣ 2007 ರ ಫೆಬ್ರವರಿ 2 ರಂದು ಕಾವೇರಿ ಕಣಿವೆಯಲ್ಲಿ 740 ಟಿಎಂಸಿ ನೀರಿದೆ ಎಂದು ಲೆಕ್ಕ ಹಾಕಲಾಯಿತು.

ಕರ್ನಾಟಕಕ್ಕೆ 270, ತಮಿಳುನಾಡಿಗೆ 419 ಟಿಎಂಸಿ, ಕೇರಳಕ್ಕೆ 30 ಟಿಎಂಸಿ, ಪದುಚೇರಿಗೆ 10, ಪರಿಸರ ಸರಂರಕ್ಷಣೆಗೆ 10 ಟಿಎಂಸಿ, ಸಮುದ್ರ ಸೇರುವ 4 ಟಿಎಂಸಿ ನೀರನ್ನು ಹಂಚಲಾಯಿತು. ಇದರ ಜೊತೆ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ಆದೇಶಿಸಿತ್ತು.

By Suddi9

Leave a Reply

Your email address will not be published. Required fields are marked *