ಶಿವಮೊಗ್ಗ: ರೈಲೊಂದು ಚಲಿಸುತ್ತಿದ್ದ ವೇಳೆ ಸಿವಿಲ್ ಡಿಪ್ಲಮೋ ವಿದ್ಯಾರ್ಥಿಯೋರ್ವ ಹಳಿಗೆ ತಲೆ ಇಟ್ಟು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಇಲ್ಲಿನ ಮಲ್ಲೇಶ್ವರದ ರೈಲ್ವೇ ಗೇಟ್ ಬಳಿ ಬುಧವಾರ ನಡೆದಿದೆ.
ಮೂಲತಃ ತಾಲೂಕಿನ ಸಿರಿಗೆರೆ ಸಮೀಪದ ಕಾಚಿಕೊಪ್ಪ ಗ್ರಾಮದ ಕೆ.ಎನ್. ದರ್ಶನ್ ಎಂದು ಗುರುತಿಸಲಾಗಿದೆ.
ದರ್ಶನ್ ಉಡುಪಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸಿವಿಲ್ ವಿಭಾಗದ ದ್ವಿತೀಯ ವರ್ಷದ ವ್ಯಾಸಂಗ ಮಾಡುತ್ತಿದ್ದ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಈ ಬಗ್ಗೆ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

