ಕೃಷ್ಣ ಮಠ ರಥ ಬೀದಿಯಲ್ಲಿ ಫೋಟೋಶೂಟ್ ಮಾಡುವಂತಿಲ್ಲ, ಪರ್ಯಾಯ ಪುತ್ತಿಗೆ ಮಠದಿಂದ ಮಹತ್ವದ ನಿರ್ಧಾರ

ಸಿಕ್ಕಸಿಕ್ಕಲ್ಲಿ ಫೋಟೋಶೂಟ್ ಜೋಡಿಗಳು, ಅದರಲ್ಲೂ ಹಿಂದೂ ಶ್ರದ್ಧ ಕೇಂದ್ರಗಳಲ್ಲಿ ಇದರ ಹಾವಳಿ ಹೆಚ್ಚಾಗಿದೆ. ಇದೀಗ ಉಡುಪಿ ಕೃಷ್ಣ ಮಠ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಕೃಷ್ಣ ಮಠ ರಥ ಬೀದಿಯಲ್ಲಿ ಫೋಟೋಶೂಟ್ ಮಾಡುವಂತಿಲ್ಲ. ಪ್ರಿ ವೆಡ್ಡಿಂಗ್ ಪೋಸ್ಟ್ ವೆಡ್ಡಿಂಗ್ ಶೂಟಿಂಗ್ ಮಾಡಲು ಅವಕಾಶವಿಲ್ಲ ಎಂದು ಕೃಷ್ಣ ಮಠದ ಆಡಳಿತ ಮಂಡಳಿ ಹೇಳಿದೆ. ಬೆಳ್ಳಂಬೆಳ್ಳಗ್ಗೆ ಮಠದ ಆವರಣದಲ್ಲಿ ಅಸಭ್ಯ ವರ್ತನೆ ಕಾಣಲು ಸಿಗುತ್ತಿದೆ ಎಂದು ಪರ್ಯಾಯ ಪುತ್ತಿಗೆ ಮಠದಿಂದ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕೇರಳ ಬೆಂಗಳೂರು ಕಡೆಯಿಂದ ಬರುವ ಫೋಟೋಗ್ರಾಫರ್ಸ್, ಪಾರಂಪರಿಕ ಕಟ್ಟಡಗಳು ಮಠ ಇರುವ ರಥಬೀದಿ, ಫೋಟೋಶೂಟ್ ನೆಪದಲ್ಲಿ ರಥಬೀದಿಯಲ್ಲಿ ಪ್ರೇಮ ಸಲ್ಲಾಪ ಮಾಡುತ್ತಿದ್ದಾರೆ. ಅಷ್ಟಮಠಾಧೀಶರು ಓಡಾಡುವ ರಥಬೀದಿಯಲ್ಲಿ ನೂರಾರು ವರ್ಷಗಳಿಂದ ಯತಿಗಳು ದಾಸರು ನಡೆದಾಡಿದ ಬೀದಿಯಲ್ಲಿ ಇಂತಹ ವರ್ತನೆ ಸಲ್ಲದು, ಪ್ರತಿ ದಿನ ನಡೆಯುತ್ತೆ ರಥ ಬೀದಿಯಲ್ಲಿ ಉತ್ಸವ ನಡೆಯುತ್ತದೆ. ಈ ಸಮಯದಲ್ಲಿ ಇಂತಹ ಪ್ರೇಮ ಸಲ್ಲಾಪ ನಡೆಯುತ್ತದೆ ಎಂದು ಹೇಳಿದ್ದಾರೆ.