ಉಡುಪಿ: ದ್ವಿ ಚಕ್ರ ವಾಹನದಲ್ಲಿ ಡ್ರಿಂಕ್ ಅಂಡ್ ಡ್ರೈವ್ ಮಾಡಿದ ವಿದ್ಯಾರ್ಥಿಗಳು

ಉಡುಪಿಯ ಮಣಿಪಾಲದಲ್ಲಿ ವಿದ್ಯಾರ್ಥಿಗಳಿಂದ ಟ್ರಾಫಿಕ್ ಉಲ್ಲಂಘನೆ ಮಾಡಿರುವ ಬಗ್ಗೆ ವಿಡಿಯೋ ವೈರಲ್ ಆಗಿದೆ. ದ್ವಿ ಚಕ್ರ ವಾಹನದಲ್ಲಿ ಅಪಾಯಕರಿ ಸ್ಥಿತಿಯಲ್ಲಿ ಡ್ರಿಂಕ್ ಅಂಡ್ ಡ್ರೈವ್ ಮಾಡಿದ್ದಾರೆ. ಟ್ರಾಫಿಕ್ ರೂಲ್ಸ್ ಗಾಳಿಗೆ ತೂರಿ ತ್ರಿಬಲ್ ರೈಡ್ ಮಾಡಿದ್ದಾರೆ. ಈ ವಿಡಿಯೋವೊಂದು ವೈರಲ್ ಆಗಿದೆ.
ಓರ್ವ ಯುವತಿ ಹಾಗು ಇಬ್ಬರು ಯುವಕರಿಂದ ತ್ರಿಬಲ್ ರೈಡ್ ಮಾಡಿದ್ದಾರೆ. ಇಬ್ಬರು ಯುವಕರ ಮಧ್ಯೆ ಹೆಲ್ಮೆಟ್ ಇಲ್ಲದೆ ಯುವತಿ ಕೂತಿರುವ ವಿಡಿಯೋ ವೈರಲ್ ಆಗಿದೆ. ಮಧ್ಯಪಾನ ಸೇವಿಸಿ ಅಪಾಯಕಾರಿ ಸ್ಕೂಟರ್ ಸವಾರಿ ಮಾಡಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಟ್ರಾಫಿಕ್ ಪೊಲೀಸರ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿ ಶನಿವಾರ ಇದೆ ರೀತಿ ವಿದ್ಯಾರ್ಥಿಗಳಿಂದ ಸಂಚಾರ ನಿಯಮ ಉಲ್ಲಂಘನೆ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಸೂಕ್ತ ಕ್ರಮಕ್ಕೆ ಆಗ್ರಹ ಮಾಡಲಾಗಿದೆ.