ಸಿನಿಮಿಯ ಸ್ಟೈಲ್​ನಲ್ಲಿ ಪೊಲೀಸರು ಮಣಿಪಾಲದಲ್ಲಿ ರೋಚಕ ಕಾರ್ಯಚರಣೆಯೊಂದನ್ನು ನಡೆಸಿದ್ದಾರೆ. ಪ್ರಕರಣವೊಂದರ ಆರೋಪಿಯನ್ನು ಪೊಲೀಸರು ಚೆಸಿಂಗ್ ಮಾಡುವ ವೇಳೆ ಸರಣಿ ಅಪಘಾತಗಳು ಸಂಭವಿಸಿದೆ. ಆದರೂ, ಮಣಿಪಾಲ ಪೋಲೀಸರ ಸಮಯ ಪ್ರಜ್ಞೆಯಿಂದ ಕುಖ್ಯಾತ ಗ್ಯಾಂಗ್​ನ ಸದಸ್ಯನ ಬಂಧನವಾಗಿದೆ. ಕುಖ್ಯಾತ ಗರುಡ ಗ್ಯಾಂಗ್​ನ ದಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಇಸ್ಸಾಕ್​ನ ಬೆನ್ನು ಬಿದ್ದಿದ್ದ ಬೆಂಗಳೂರಿನ ನೆಲಮಂಗಲ ಠಾಣೆ ಪೊಲೀಸರು, ಆರೋಪಿ ಜಾಡು ಹಿಡಿದು ಉಡುಪಿಯ ಮಣಿಪಾಲಕ್ಕೆ ತೆರಳಿದ್ದರು. ಈ ವೇಳೆ ಕಾರಿನಲ್ಲಿ ಓರ್ವ ಯುವತಿಯೊಂದಿಗೆ ಜಾಲಿ ಮಾಡಲು ಮಣಿಪಾಲಕ್ಕೆ ಬಂದಿದ್ದ ಇಸ್ಸಾಕ್ ಎಂಬ ನಟೋರಿಯಸ್ ಕ್ರಿಮಿನಲ್ ಪೊಲೀಸರನ್ನು ಕಂಡ ಕೂಡಲೇ ತನ್ನ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ವೇಗವಾಗಿ ಗಾಡಿ ಚಲಾಯಿಸಿ ನಾಲ್ಕು ಕಾರು ಹಾಗು ಒಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದಾನೆ.

ಈ ವೇಳೆ, ನೆಲಮಂಗಲ ಪೊಲೀಸರು ಮಣಿಪಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಮಣಿಪಾಲ ಪೊಲೀಸ್ ಇನ್ಸ್ಪೆಕ್ಟರ್ ದೇವರಾಜ್ ನೇತೃತ್ವದ ತಂಡ ಆರೋಪಿಯನ್ನ ಸಾಹಸಮಯವಾಗಿ ಚೇಸ್ ಮಾಡಿ ಮಣಿಪಾಲದ ಮಣ್ಣಪಳ್ಳದ ಬಳಿ ಕಾರಿನೊಂದಿಗೆ ಸೆರೆ ಹಿಡಿದಿದ್ದಾರೆ. ಒಂದಿಷ್ಟು ಸೆಕೆಂಡ್ ಲೇಟ್ ಆಗಿದ್ದರೂ, ಕ್ರಿಮಿನಲ್ ಇಸ್ಸಾಕ್​ ಮಿಸ್ ಆಗುತ್ತಿದ್ದ. ಆದರೆ, ಮಣಿಪಾಲ ಪೊಲೀಸ್ ಇನ್ಸ್ಪೆಕ್ಟರ್ ದೇವರಾಜ್ ಅವರ ತ್ವರಿತ ಕಾರ್ಯಾಚರಣೆ ಫಲ ನೀಡಿದೆ.

By suddi9

Leave a Reply

Your email address will not be published. Required fields are marked *