ಸುದ್ದಿ9 ವಿಶೇಷ: ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ, ಶ್ರಾವಣ ಮಾಸದ, ಕೃಷ್ಣ ಪಕ್ಷದ ಎಂಟನೇ ದಿನವನ್ನು ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುತ್ತಿದೆ. ಅದಕ್ಕಾಗಿ ಈ ವಿಶೇಷ ಲೇಖನ.
ಶ್ರೀ ಕೃಷ್ಣ ದೇವಕಿಯ ಪುತ್ರ, ವಸುದೇವ ಸುತ. ಕೃಷ್ಣನ ಅಣ್ಣ ಬಲರಾಮ.

a krishna

kr

kr2

kr3
ಆಕರ್ಷಣಂ ಕರೋತಿ ಇತಿ ಕೃಷ್ಣಃ
ಯಾವನು ಆಕಷರ್ಿಸುತ್ತಾನೆಯೋ ಅವನೇ ಶ್ರೀಕೃಷ್ಣ.
ಶ್ರೀಕೃಷ್ಣನ ವೈಶಿಷ್ಠ್ಯವೇನೆಂದರೆ ಅವನ ಬಾಲ್ಯಾವಸ್ಥೆ ಕೇವಲ ಏಳು ವರುಷ. ಶ್ರೀಕೃಷ್ಣ ಶ್ಯಾಮವರ್ಣದವನಾಗಿದ್ದಾನೆ. ಶ್ಯಾಮವೆಂದರೆ ಕಪ್ಪುಬಣ್ಣವಲ್ಲ, ತಪ್ತ ಕಾಂಚನ ವರ್ಣ. ಅಂದರೆ ಕಾಯಿಸಿದ ಚಿನ್ನದಂತಹಾ ಕೆಂಪು ಬಣ್ಣ, ಹಾಗೆಯೇ ಹಳದಿ ಮತ್ತು ನೀಲಿ. ಈ ಮೂರು ಬಣ್ಣಗಳ ಮಿಶ್ರಣ ಇರುವ ಬಣ್ಣ.
ಕೃಷ್ಣನನ್ನು ಬಂಧಿಸಲು ಜರಾಸಂಧನು 18 ಬಾರಿ ಮಥುರೆಗೆ ಮುತ್ತಿಗೆ ಹಾಕಿದನು, ಒಬ್ಬ ವ್ಯಕ್ತಿಯನ್ನು ಹಿಡಿಯಲು ಇಷ್ಟು ಸಲ ಮುತ್ತಿಗೆ ಹಾಕಿರುವ ಉದಾಹರಣೆಯು ಜಗತ್ತಿನಲ್ಲಿ ಬೇರೊಂದಿಲ್ಲ.
ಕಂಸನು ಮರದ ತೆಪ್ಪಗಳ ಸಹಾಯದಿಂದ 280 ಆನೆಗಳನ್ನು ಯಮುನಾ ನದಿಯನ್ನು ದಾಟಿಸಿ ತಂದನು, ಮತ್ತು ಮೂರು ತಿಂಗಳ ಕಾಲ ಮಥುರೆಗೆ ಮುತ್ತಿಗೆ ಹಾಕಿದನು, ಆದರೂ ಕೃಷ್ಣನು ಸಿಗಲಿಲ್ಲ. ಏಕೆಂದರೆ ಕೃಷ್ಣನು ಪ್ರತಿನಿತ್ಯವೂ ಮನೆಯನ್ನು ಬದಲಿಸುತ್ತಿದ್ದನು, ಒಂದು ಸಾವಿರ ಮಕ್ಕಳು ಶ್ರೀಕೃಷ್ಣನಂತೆಯೇ ನವಿಲುಗರಿಗಳನ್ನು ಧರಿಸಿರುತ್ತಿದ್ದರು. ಕಂಸನ ಸೈನಿಕರು ಹೊಡೆದರೂ ಸಹ, ಆ ಚಿಕ್ಕ ಮಕ್ಕಳು ನಿಜವಾದ ಕೃಷ್ಣ ಯಾರೆಂಬುವುದನ್ನು ಹೇಳಲಿಲ್ಲ,
ಮಕ್ಕಳು, ಸಂಬಂಧಿಕರು ಮುಂತಾದವರು ಅಯೋಗ್ಯವಾಗಿ ವತರ್ಿಸಿದರೆಂದು ಮಹಾಭಾರತ ಯುದ್ಧದ ಸಮಯದಲ್ಲಿ ಶ್ರೀಕೃಷ್ಣನು ಸ್ವತಃ ಅವರನ್ನು ನಾಶ ಮಾಡಿದನು, ತನ್ನ ಕುಲವನ್ನು ನಾಶ ಮಾಡುವವರಲ್ಲಿ ಶ್ರೀ ಕೃಷ್ಣ ಏಕೈಕ ಅವತಾರವಾಗಿದ್ದಾನೆ, ಇವನ ಬಾಲ್ಯ ಸ್ನೇಹಿತ ಸುದಾಮ ಅಥವಾ ಕುಚೇಲ.
ಕೆಲವರು ಶ್ರೀಕೃಷ್ಣನ ನಡತೆಯನ್ನು ಟೀಕಿಸುತ್ತಾರೆ, ಆದರೆ ಅವನು ಎಲ್ಲವನ್ನೂ ಇತರರ ಕಲ್ಯಾಣಕ್ಕಾಗಿಯೇ ಮಾಡಿದ್ದಾನೆ. ಉದಾಹರಣೆಗೆ ಜರಾಸಂಧ ವಧೆ, ಅಜರ್ುನ ಸುಭದ್ರಾ ವಿವಾಹ, ಹದಿನಾರು ಸಾವಿರ ಸ್ತ್ರೀಯರೊಂದಿಗೆ ವಿವಾಹ. ಅಧಮರ್ಿಗಳನ್ನು ಅವರ ಮಾರ್ಗದಿಂದಲೇ ಸೋಲಿಸಿದನು, ಆದರೂ ಶ್ರೀಕೃಷ್ಣನು ಸ್ವತಃ ರಾಜನಾಗಲಿಲ್ಲ, ನಮ್ರನಾಗಿದ್ದನು, ಬ್ರಾಹ್ಮಣರ ಪಾದ ಪೂಜೆ ಮಾಡಿದನು ಮತ್ತು ಎಂಜಲು ಎಲೆಗಳನ್ನು ಎತ್ತಿದನು,
ಶ್ರೀಕೃಷ್ಣ ಗುರು, ಜಗದ್ಗುರು, ತತ್ವಜ್ಞಾನಿ:
ಜಾಂಬವಂತನೆಂಬ ಕರಡಿಗಳ ರಾಜನು `ನನ್ನ ಮಗಳು ಜಾಂಬವತಿಯನ್ನು ವಿವಾಹವಾಗಬೇಕು’ ಎಂದು ಪ್ರಾಥರ್ಿಸಿದಾಗ, ಎಲ್ಲರ ವಿರೋಧವಿದ್ದರೂ ಕೃಷ್ಣನು ಅವಳನ್ನು ವರಿಸಿದನು, ನರಕಾಸುರನ ಸೆರೆಯಿಂದ ಬಿಡುಗಡೆಗೊಳಿಸಿದ ಹದಿನಾರು ಸಾವಿರ ಕನ್ಯೆಯರಿಗೆ ಗೌರವ ಸಿಗಬೇಕೆಂದು ಕೃಷ್ಣನು ಅವರನ್ನು ವಿವಾಹವಾದನು, ಇದರಿಂದ ಅವರ ಮಾನರಕ್ಷಣೆಯೂ ಆಯಿತು. ಪ್ರಾಣ ರಕ್ಷಣೆಯೂ ಆಯಿತು. (ಹದಿನಾರು ಸಾವಿರ ಕನ್ಯೆಯರೆಂದರೆ ಶರೀರದಲ್ಲಿನ ಹದಿನಾರು ಸಾವಿರ ನಾಡಿಗಳು, ಅಥವಾ ಶಕ್ತಿ ವಾಹಿನಿಗಳು)
ಕೃಷ್ಣನ ಪಟ್ಟದ ರಾಣಿ ರುಕ್ಮಿಣಿ, ಇತರ ರಾಣಿಯರ ಹೆಸರುಗಳು
ಸತ್ಯಭಾಮ
ಜಾಂಬವತಿ,
ಕಾಲಿಂದೀ
ಮಿತ್ರವೃಂದಾ
ಸತ್ಯಾ
ಭದ್ರಾ
ಲಕ್ಷ್ಮಣಾ
(ಎಂಟು ರಾಣಿಯರೆಂದರೆ ಅಷ್ಟಧಾ ಪ್ರಕೃತಿ ಅಂದರೆ ಪೃಥ್ವಿ, ಅಪ್, ತೇಜ, ವಾಯು, ಆಕಾಶ, ಮನಸ್ಸು, ಚಿತ್ತ, ಬುದ್ಧಿ ಇವು ಕೃಷ್ಣನ ಅಧೀನ)
ರಾಧಾ-ಕೃಷ್ಣ: ರಾಧೆ ಭಕ್ತಿಯ ಸಂಕೇತ, ಪ್ರಣಯದ ಸಂಕೇತವಲ್ಲ, ಶ್ರೀಕೃಷ್ಣನು ಗೋಕುಲವನ್ನು ಬಿಟ್ಟಾಗ ಅವನಿಗೆ ಕೇವಲ ಏಳು ವರ್ಷ. ಅಂದರೆ ಕೃಷ್ಣನು ಮೂರರಿಂದ ಏಳು ವರ್ಷದವನಾಗಿರುವ ತನಕ ರಾಧಾಕೃಷ್ಣರ ಸಂಬಂಧವಿತ್ತು. ಆದ್ದರಿಂದ ರಾಧೆ ಹಾಗೂ ಕೃಷ್ಣನ ಮಧ್ಯೆ ಆರೋಪ ಮಾಡುವುದು ತಪ್ಪು,
ಕೃಷ್ಣನ ವಿವಿಧ ರೂಪಗಳು:
1. ಸಂತಾನ ಗೋಪಾಲ(ಯಶೋದೆಯ ಸೊಂಟದಲ್ಲಿ ಕುಳಿತು ತಬ್ಬಿ ಹಿಡಿದವನು)
2. ಬಾಲಕೃಷ್ಣ
3. ಕಾಳಿಂಗ ಕೃಷ್ಣ
4. ಗೋವರ್ಧನಧಾರಿ
5. ರಾಧಾಕೃಷ್ಣ ಅಥವಾ ವೇಣುಗೋಪಾಲ
6. ಮುರಳೀಧರ
7. ಮದನಗೋಪಾಲ(ಅಷ್ಠ ಭುಜಗಳ ಮುರಳೀಧರ)
8. ಪಾರ್ಥ ಸಾರಥಿ
ಕೃಷ್ಣನ ನಾಮಜಪ:
1. ಓಂ ನಮೋ ಭಗವತೇ ವಾಸುದೇವಾಯ
2. ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ, ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ.
-ಗ್ರಂಥಾಧಾರ: ಸನಾತನ ಸಂಸ್ಥೆ ನಿಮರ್ಿತ ಶ್ರೀಕೃಷ್ಣ

By suddi9

Leave a Reply

Your email address will not be published. Required fields are marked *