ಬೃಹದಾಕಾರದ ಬಂಡೆಯನ್ನು ಬೆಟ್ಟವೊಂದರ ಮೇಲೆ ಹಾಗೆಯೇ ಯಾರೋ ನಿನ್ನೆಯೆಂಬಂತೆ ಬಿಟ್ಟುಹೋದಂತೆ ಕಾಣುವ ಈ ಬೆಟ್ಟ ಮನುಷ್ಯನ ಸೂಕ್ಷ್ಮ ಪ್ರಜ್ಞೆಗೆ ಅಚ್ಚರಿಯನ್ನು ತರುತ್ತದೆ. 
ಹೌದು ಕಾರ್ಕಳ ತಾಲೂಕಿನಲ್ಲಿರುವ ನಕ್ರೆ ಎಂಬ ಪುಟ್ಟ ಊರಿನಲ್ಲಿ ಪರ್ವತದ ಮೇಲೆ ಈ ಬೃಹತ್ ಬಂಡೆಯನ್ನು ಇಟ್ಟು ಹೋದವರು ಯಾರು ಎಂಬುಂತೆ ಕಾಣುವ ಈ ನಕ್ರೆ ಬೆಟ್ಟ ಪ್ರಕೃತಿಯ ಮೇಲೆ ತೀರಾ ಕುತೂಹಲಿ ವ್ಯಕ್ತಿಯ ಮನಸ್ಸಲ್ಲಿ ಆಂದೋಳನವನ್ನು ಸೃಷ್ಟಿಸದೆ ಬಿಡುವುದಿಲ್ಲ.

DSC09020

DSC09045

DSC08996

DSC08998

DSC09000

 

DSC09011
ಕಾರ್ಕಳದಲ್ಲಿ ನಕ್ರೆ ಬೆಟ್ಟದಲ್ಲಿ ಹಾಗೆಯೇ ಕೂತು ಸೂಯರ್ಾಸ್ತಮಾನವನ್ನು ನೋಡುವುದೇ ಒಂದು ಸೊಬಗು ಎಂದು ನನ್ನ ಗೆಳೆಯ ಶಶಿ ಹೇಳಿದರು. ನನಗೆ ಈ ಮೊದಲು ಅಂಥದೊಂದು ಬೆಟ್ಟವಿದೆ ಎಂದು ಗೊತ್ತೂ ಇರಲಿಲ್ಲ. ಅದರಂತೆ ತಂಡ ಐದು ಜನರ ತಂಡ ರೆಡಿ ಮಾಡಿಕೊಂಡು, ಕಾರ್ ಮಾಡಿಕೊಂಡು ಹೊರಟೆವು. ಬರೋಬ್ಬರಿ 650 ಮೀಟರ್ಗಿಂತಲೂ ಹೆಚ್ಚು ಎತ್ತರದಲ್ಲಿರುವ ಬೆಟ್ಟವನ್ನು ಹೇಗೆ ಹತ್ತುವುದು ಎಂಬುದು ನಮ್ಮ ರಾಜೇಶಣ್ಣನಿಗೆ ಒಂದೇ ಚಿಂತೆ. ಆದರೆ ಶಶಿ, ಮೋಹನ್, ಅಶೋಕ್ ಎಂಬ ಉತ್ಸಾಹಿ ತರುಣರು ನಮ್ಮ ತಂಡದಲ್ಲಿದ್ದಾರೆಂದರೆ ಯಾವ ಮೌಂಟ್ಎವರೆಸ್ಟ್ ಹತ್ತಲೂ ರೆಡಿ ಇರುತ್ತಾರೆಂದಾದ ಮೇಲೆ ರಾಜೇಶಣ್ಣ ಹತ್ತದೆ ಇರುತ್ತಾರೆಯೇ, ನೋಡೇ ಬಿಡೋಣ ಎಂದು ನಿರ್ಧರಿಸಿದೆವು.ಮೋಹನ್ ಬೆಟ್ಟದ ಬುಡದಲ್ಲಿ ಕಾರ್ ತಂದು ನಿಲ್ಲಿಸಿದರು. ಎತ್ತರದ ತೆಂಗಿನ ಮರದ ಬುಡದಲ್ಲಿ ನಿಂತಂತೆ ಭಾಸವಾಯ್ತು. ನಿಜವಾಗಿ ನೋಡಿದರೆ ರಾಜೇಶ್ಗಿಂತ ನನಗೇ ಹೆಚ್ಚು ಭಯವಾದಂತೆ ಕಂಡಿತ್ತು. ಆದರೆ ತೋರ್ಪಡಿಸದೆ ಗತ್ತಿನಿಂದ ನಾನೇ ಮೊದಲಿಗನಾಗಿ ಮುಂದಕ್ಕೆ ಹೆಜ್ಜೆ ಇಟ್ಟೆ.
`ಶ್… ಜಾಗ್ರತೆ ಬಿದ್ದು ಬಿಟ್ರೆ ಎಲುಬು ಆರಿಸ್ಕೊಳ್ಳಲೂ ಸಾಧ್ಯವಿಲ್ಲ…’ ಎಂದು ಶಶಿ ಒಂದೇ ಸಮನೆ ಕೊರೆಯುತ್ತಾ ಇದ್ದರು. ಆದರೆ ಇದನ್ನೆಲ್ಲಾ ಕೇಳಿಸಿಯೂ ಕೇಳದಂತೆ ನಾವೆಲ್ಲಾ ಬೆಟ್ಟ ಹತ್ತತೊಡಗಿದೆವು. ಇಷ್ಟೊತ್ತಿಗೆ ರಾಜೇಶ ಮಾತ್ರ ಅಯ್ಯಯ್ಯಪ್ಪೋ ಎಂದು ಏದುಸಿರು ಬಿಡುತ್ತಿದ್ದರು.
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತೆ ಕಂಡರೂ ನನ್ನ ಗ್ರಿಪ್ ಇಲ್ಲದ ಶೂನಿಂದಾಗಿ ಅನೇಕ ಸಲ ಬೀಳುವ ಯತ್ನದಲ್ಲಿದ್ದೆ. ಆದರೆ ಏನೂ ಆಗಲಿಲ್ಲ. ಇನ್ನು ಬೆಟ್ಟವನ್ನು ಸ್ವಲ್ಪ ಕ್ರಮಿಸಿದ ಮೇಲೆ ಅಗಲವಾದ ಬಂಡೆಯನ್ನು ಹತ್ತಬೇಕು. ಆದಕ್ಕಾಗಿ ಮರ ಹತ್ತುವಾಗ ಯಾವ ರೀತಿ ಬಗ್ಗುತ್ತೇವೆಯೂ ಅದೇ ರೀತಿ ಅಂಬೆಗಾಲಲ್ಲಿ ನಡೆಯುವ ಮಗುವಿನಂತೆ ಬಂಡೆ ಹತ್ತತೊಡಗಿದೆವು.
ಆಳವಾದ ಗುಹೆ:
ನಕ್ರೆ ಬೆಟ್ಟದಲ್ಲಿ ಮೊದಲು ನಮ್ಮನ್ನು ಸ್ವಾಗತಿಸುವುದು ಒಂದು ಆಳವಾದ ಗುಹೆ. ಇದು ಸುಮಾರು ಒಂದು ಕಿ.ಮೀ,ನಷ್ಟು ವಿಸ್ತಾರವಾಗಿದ್ದು, ಇದು ಬೆಟ್ಟದ ದಕ್ಷಿಣ ಭಾಗದಲ್ಲಿ ತೆರೆದುಕೊಳ್ಳುತ್ತದೆ ಎಂದು ಹೇಳುತ್ತಾರೆ ಸ್ಥಳೀಯರು. ಈ ಗುಹೆಯನ್ನು ಹೊಕ್ಕ ಎಂಟೆದೆ ಗಂಡು ಇನ್ನೂ ಹುಟ್ಟಿಕೊಂಡಿಲ್ಲ. ಯಾಕೆಂದರೆ ಕಗ್ಗತಲು, ಆದರೆ ಆಳಕ್ಕೆ ಹೋಗುತ್ತಿದ್ದಂತೆ ಆಮ್ಲಜನಕ ಲಭ್ಯವಿರುತ್ತದೋ ಇಲ್ಲವೋ ಎಂದು ತಿಳಿಯದು.
ಆದರೆ ಇಲ್ಲಿ ಇನ್ನೊಂದು ವಿಶೇಷವಿದೆ. ಈ ಗುಹೆಯ ಒಳಗಡೆ ಅಸಂಖ್ಯಾತ ಬಾವಲಿಗಳು ಗೂಡು ಕಟ್ಟಿವೆ. ಅದರಂತೆ ಬಾವಲಿಯ ಕಕ್ಕದ ವಾಸನೆ ಕೂಡಾ ಬರುತ್ತದೆ. ಅಲ್ಲದೆ ಇದರೊಳಗಡೆ ಹುಲಿ, ಚಿರತೆಯಂತಹಾ ಕ್ರೂರ ಪ್ರಾಣಿಗಳು ಇರುವ ಸಾಧ್ಯತೆಯೂ ಹೆಚ್ಚಿದೆ.
ಈ ಗುಹೆಯನ್ನು ದಾಟಿ ಮತ್ತೊಂದು ಬಂಡೆ ಎದುರಾಗುತ್ತದೆ. ಇದು ಇವತ್ತೋ ನಾಳೆಯೋ ಉರುಳಿ ಬೀಳಬಹುದು ಎಂಬಂತೆ ಭಾಸವಾಗುತ್ತದೆ. ಯಾಕೆಂದರೆ ಇದರ ಬುಡಭಾಗದಲ್ಲಿ ಕೀಲು ಕೊಟ್ಟಂತೆ ಇನ್ನೊಂದು ಬಂಡೆ ತಾಗಿಕೊಂಡಿದೆ. ಆದರೆ ಇದನ್ನು ಹತ್ತಬೇಕಾದರೆ ಸ್ವಲ್ಪ ಸರ್ಕಸ್ ಮಾಡಬೇಕಾಯ್ತು. ಹೀಗೆಯೇ ಒಂದಕ್ಕೊಂದು ಕೀಲುಕೊಟ್ಟಂತೆ ಜೋಡಣೆಯಾಗುವ ಬಂಡೆಯನ್ನು ನೋಡಿದಾಗ ಸ್ವಲ್ಪ ಹೊತ್ತಲ್ಲೇ ಉರುಳಿ ಬೀಳಬಹುದು ಎಂದು ಭಾಸವಾಗುತ್ತದೆ.
ಕಲ್ಲಲ್ಲೂ ಅರಳಿದ ಪ್ರೀತಿ:
ನಕ್ರೆ ಬೆಟ್ಟದ ತುತ್ತ ತುದಿಯಲ್ಲಿ ಲವ್ ಸಿಂಬಲ್ನಲ್ಲಿ ನಿಂತಿರುವ ಒಂದು ಚಿಕ್ಕ ಬಂಡೆಯಿದೆ. ಇದನ್ನು ಹಿಂದಿನಿಂದ ದೂಡಿದರೆ ಪ್ರಪಾತಕ್ಕೆ ಉರುಳಬಹುದು ಎನ್ನುವಂತೆ ಭಾಸವಾಗುತ್ತದೆ. ಆದರೆ ಇಲ್ಲಿ ಮಾತ್ರ ನಮ್ಮ ಹುಚ್ಚಾಟ, ಮಂಗಾಟಕ್ಕೆ ಬ್ರೇಕ್ ಹಾಕುವುದು ಒಳಿತು. ಯಾಕೆಂದರೆ ಇಲ್ಲಿ ಸ್ವಲ್ಪ ಯಾಮಾರಿದರೂ ಪ್ರಪಾತಕ್ಕೆ ಬೀಳುವುದು ಖಂಡಿತಾ.
ಈ ಬೆಟ್ಟದ ಪಕ್ಕದಲ್ಲೇ ಇನ್ನೊಂದು ಬೃಹತ್ ಬಂಡೆಯಿದೆ. ಇದನ್ನು ಹತ್ತಲು ಸಾಧ್ಯವಿಲ್ಲ. ಆದರೆ ಇದರ ಪಕ್ಕದಲ್ಲಿ ಮರವೊಂದು ಮಲಗಿದ ಸ್ಥಿತಿಯಲ್ಲಿದ್ದರಿಂದ ನಾನೂ ಹಾಗೂ ಮೋಹನ್ ಈ ಬೆಟ್ಟವನ್ನು ಹತ್ತಿದೆವು. ಇದರ ತುದಿಯಲ್ಲಿ ನಿಂತು ನೋಡಿದರೆ ಇಡೀ ಕಾರ್ಕಳದ ದರುಶನವಾಗುತ್ತದೆ,
ಸಂಭ್ರಮದ ಸೂಯರ್ಾಸ್ತ:
ಈ ಬೆಟ್ಟದಲ್ಲಿ ಸೂಯರ್ಾಸ್ತದ ಸಂಭ್ರಮವನ್ನು ಸವಿಯಬೇಕಾದರೆ ಮುಸ್ಸಂಜೆ ಸೂಕ್ತ ಸಮಯ. ನಾವು ಬೆಟ್ಟ ಹತ್ತಿದ್ದೂ ಮುಸ್ಸಂಜೆಯ ಹೊತ್ತು. ಅದರಂತೆ ಕೆಂಬಣ್ಣದ ಆಕಾಶದಲ್ಲಿ ಸೂರ್ಯ ತಮ್ಮ ಭೂಮಿಯ ಒಳಗಡೆ ತೂರಿಕೊಳ್ಳುತ್ತಿದ್ದಾನೆ ಎಂಬಂತೆ ಭಾಸವಾಗುವ ರೀತಿಯಲ್ಲಿ ಸೂಯರ್ಾಸ್ತಮಾನದ ದರುಶನ ಭಾಗ್ಯ ನಮಗೆ ಸಿಕ್ಕಿತು.
ತುಂಬಾ ಜಾಗ್ರತೆ:
ನಕ್ರೆ ಬೆಟ್ಟ ಕಾಡು ಪ್ರದೇಶ. ಆಗಲೇ ಹೇಳಿದಂತೆ ಇಲ್ಲಿ ಹುಲಿ ಚಿರತೆಯಂಥಾ ಪ್ರಾಣಿಗಳಿವೆ. ಕತ್ತಲಾದಂತೆ ಈ ನಿಶಾಚರ ಪ್ರಾಣಿಗಳು ಹೊರಬರುತ್ತದೆ. ಆದುದರಿಂದ ಮುಸ್ಸಂಜೆಯ ಸೂಯರ್ಾಸ್ತಮಾನವನ್ನು ಸವಿಯುವವರು ಕತ್ತಲಾದಂತೆ ಇಳಿಯುವುದು ಸೂಕ್ತ. ಅಲ್ಲದೆ ದಟ್ಟ ಪೊದೆ ಇರುವುದರಿಂದ ಒಂದು ಕೋಲು ಹಾಗೂ ಕತ್ತಿ ಇದ್ದರೆ ಪೊದೆಯನ್ನು ಸರಿಸುತ್ತಾ ಸುಲಭವಾಗಿ ಬೆಟ್ಟ ಹತ್ತಬಹುದು. ಜೊತೆಗೆ ಗ್ರಿಪ್ ಇರುವ ಶೂ ಹಾಗೂ ಸಡಿಲವಾದ ಬಮರ್ುಡಾ, ಟೀಶಟರ್್ನಂಥಾ ಬಟ್ಟೆ ತೊಡುವುದು ಒಳ್ಳೆಯದು. ಅಲ್ಲದೆ ಜೊತೆಯಲ್ಲಿ ಭಾರದ ವಸ್ತುವನ್ನು ಕೊಂಡೊಯ್ಯುವಾಗ ಎಚ್ಚರವಹಿಸಿದರೆ ಉತ್ತಮ. ಆದರೆ ಬೆಟ್ಟ ಹತ್ತಲು ಸಾಧ್ಯವಿಲ್ಲದವರು ಹುಂಬ ಧೈರ್ಯದಿಂದ ಬೆಟ್ಟ ಹತ್ತಿ ಅಪಾಯ ತಂದುಕೊಳ್ಳುವುದು ಬೇಡವೇ ಬೇಡ.
ನಕ್ರೆ ಬೆಟ್ಟ ಕಾರ್ಕಳಪೇಟೆಯಿಂದ ನಕ್ರೆಗೆ 12 ಕಿ.ಮೀ. ದೂರದಲ್ಲಿದೆ. ನಕ್ರೆಯಿಂದ 4 ಕಿ.ಮೀ ದೂರದಲ್ಲಿ ಬೆಟ್ಟ ಕಂಡುಬರುತ್ತದೆ. ಅಲ್ಲಿಂದ ಒಂದು ಕಿ,ಮೀ ಕಾಲ್ನಡಿಗೆ ಅಷ್ಟೆ, ಅಲ್ಲಿಂದಲೇ ಬೆಟ್ಟ ಸಿಗುತ್ತದೆ. ಬೆಟ್ದ ಬುಡದವರೆಗೆ ರಸ್ತೆ ಸೌಲಭ್ಯ ಹದಗೆಟ್ಟಿರುವುದರಿಂದ ಚಾರಣ ಮಾಡುವುದು ಸೂಕ್ತ.
ಕಲ್ಲುಗಣಿಕಾರಿಗೆ ನಡೆಯುತ್ತದೆ:
ನಕ್ರೆ ಬೆಟ್ಟದ ಮತ್ತೊಂದು ಭಾಗದಲ್ಲಿ ಖಾಸಗಿಯವರು ಅವ್ಯಾಹತವಾಗಿ ಕಲ್ಲುಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಆದುದರಿಂದ ಇದರ ವಿರುದ್ಧ ಕಾನೂನು ಕ್ರಮಕೈಗೊಂಡು ನಕ್ರೆ ಬೆಟ್ಟವನ್ನು ಉಳಿಸಬೇಕಾದ ಅವಶ್ಯಕತೆ ಎದ್ದು ಕಾಣುತ್ತಿದೆ.
-ಗಿರಿ ಮಳಲಿ.

By suddi9

One thought on “ಮನುಷ್ಯನ ಸೂಕ್ಷ್ಮ ಪ್ರಜ್ಞೆಯನ್ನು ಜಾಗೃತಗೊಳಿಸುವ ನಕ್ರೆಬೆಟ್ಟ”
  1. Bahala olle lekhana nanna huttura ondu pravasi taanada bagge..dhanyavada…
    Alliruva guhe olage yaude huli chirtate illa..bavali gudu khadita ide..guhe ge ilidavaru tumba janaralli naanu kuda obba…
    agatya mahiti sangrahisi lekahna maruprakatisidare uttama embudu nanna anisike

Leave a Reply

Your email address will not be published. Required fields are marked *