ಎಡಪದವು: ಜುವಂಕಾರ್ ಟ್ರಸ್ಟ್ ಶಿಬ್ರಿಕೆರೆ ತೆಂಕ ಎಡಪದವು ಹಾಗೂ ಶ್ರೀ ವೀರಮಾರುತಿ ಕಲಾಸಂಘ ಬೋರುಗುಡ್ಡೆ ಎಡಪದವು ಇದರ ವತಿಯಿಂದ ಫೆ.11 ರಂದು ಭಾನುವಾರ ಸಂಜೆ ಗಂಟೆ 5 ರಿಂದ ರಾತ್ರಿ 9 ಗಂಟೆಯವರೆಗೆ ಎಡಪದವು ಶಿಬ್ರಿಕೆರೆ ವಿವೇಕವನ ಇಲ್ಲಿ “ಸುಭದ್ರೆ ಕಲ್ಯಾಣ” ಎಂಬ ವೈಭವದ ಯಕ್ಷಗಾನ ತಾಳಮದ್ದಳೆ ಜರುಗಲಿದೆ.

* ಭಾಗವತರಾಗಿ: ಸತೀಶ್ ಶೆಟ್ಟಿ ಪಟ್ಲ, ಶಿವಪ್ರಸಾದ್ ಎಡಪದವು,
* ಮದ್ದಳೆ: ಗುರು ಪ್ರಸಾದ್ ಬೊಳಿಂಜಡ್ಕ ಚೆಂಡೆ: ದಯಾನಂದ ಮಿಜಾರ್,
* ಅರ್ಥದಾರಿಗಳು: ವಾಸುದೇವ ಸಾಮಗ, ಎಂ ಕೆ. ರಮೇಶ್ ಆಚಾರ್ಯ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ದಿನೇಶ್ ಶೆಟ್ಟಿ ಕಾವಳಕಟ್ಟೆ, ಸೀತಾರಾಮ್ ಕುಮಾರ್ ಕಟೀಲು ಭಾಗವಹಿಸಲಿದ್ದಾರೆ.
*ಯಕ್ಷಗಾನ ಕಲಾವಿದರಿಗೆ ಸನ್ಮಾನ :
ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಅಗರಿ ರಘುರಾಮ ರಾವ್, ಕುಮಾರ ಗೌಡ ಪುತ್ತಿಗೆ ಇವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

By Suddi9

Leave a Reply

Your email address will not be published. Required fields are marked *