ಕೈಕಂಬ: ಆಯುರ್ ಸ್ಪರ್ಶ ಡಯಾಬಿಟಿಕ್ ಇನ್ನೋವೇಟಿವ್ ಫೌಂಡೇಶನ್ ಗಂಜಿಮಠ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಂದಾವರ ಶಾಖೆ ಹಾಗೂ ಶಿಫಾ ಕ್ಲಿನಿಕಲ್ ಲ್ಯಾಬೋರೇಟರಿ ಕೈಕಂಬ ಸಂಯುಕ್ತಾಶ್ರಯದಲ್ಲಿ ಮುಧುಮೇಹ ಮುಕ್ತ ಭಾರತ ಜನಜಾಗೃತಿ ಅಂಗವಾಗಿ ಇಲ್ಲಿನ ಗಂಜಿಮಠದ ಶ್ರೀ ರಾಮ್ ಸಭಾಂಗಣದಲ್ಲಿ “ಉಚಿತ ತಪಾಸಣಾ ಮತ್ತು ಮಾಹಿತಿ ಶಿಬಿರ” ಶುಕ್ರವಾರ ನಡೆಯಿತು.
ಈ ವೇಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ.ಮೇಖಲ, ನಿಯಮಿತ ಆಹಾರ ಹಾಗೂ ವ್ಯಾಯಾಮದಿಂದ ಮಧುಮೇಹ ನಿಯಂತ್ರಣ ಸಾಧ್ಯ ಎಂದು ಅವರು ವಿವರಿಸಿದರು.
ಆಯುರ್ ಸ್ಪರ್ಶ ಡಯಾಬಿಟಿಕ್ ಇನ್ನೋವೇಟಿವ್ ಫೌಂಡೇಶನ್ ಅಧ್ಯಕ್ಷ ಡಾ.ಸತೀಶ್ ಶಂಕರ ಬಿ. ಮಾತನಾಡಿ, ಮಧುಮೇಹ ನಿಯಂತ್ರಣ ಕುರಿತು ನಿರಂತರ ಜಾಗೃತಿ ಮೂಡಿಸುವುದರ ಮೂಲಕ ಭಾರತವನ್ನು ಮಧುಮೇಹ ಮುಕ್ತವನ್ನಾಗಿಸಿ ವಿಶ್ವಕ್ಕೆ ಮಾದರಿಯಾಗಿಸೋಣ ಎಂದು ಕರೆ ನೀಡಿದ ಅವರು, ನಿಯಮಿತ ಆಹಾರ, ವ್ಯಾಯಾಮದ ಜತೆಗ ಮಾನಸಿಕ ಒತ್ತಡ ರಹಿತ ಜೀವನ ಶೈಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಂದಾವರ ಶಾಖೆ ಅಧ್ಯಕ್ಷ ಸತೀಶ್ ಶೆಟ್ಟಿ ಕಂದಾವರ, ಹರಿರಾವ್ ಮತ್ತಿತರರು ಉಪಸ್ಥಿತರಿದ್ದರು.



