+545

ಮಂಗಳೂರು: ವಿದ್ಯಾರ್ಥಿನಿಗಳಾದ ಝೈಬುನ್ನಿಸಾ ಹಾಗೂ ರಚನಾಳ ಅಸಹಜ ಸಾವಿನ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಧರಣಿ ನಡೆಸಿತು.

CFI-(4)

ಈ ವೇಳೆ ಧರಣಿನಿರತರರನ್ನು ಉದ್ದೇಶಿಸಿ ಮಾತನಾಡಿದ ಸಿಎಫ್ ಐ ಜಿಲ್ಲಾಧ್ಯಕ್ಷ ಅತುವುಲ್ಲಾ ಪುಂಜಲಕಟ್ಟೆ, ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯ ಅಲ್ಪಸಂಖ್ಯಾತ ಮಾದರಿ ಶಾಲೆಯ ವಿದ್ಯಾರ್ಥಿನಿ ಝೈಬುನ್ನಿಸಾ ಹಾಗೂ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ರಚನಾ ಆತ್ಮಹತ್ಯೆ ಪ್ರಕರಣ ತೀರಾ ಸಂಶಯಕ್ಕೆ ಎಡೆ ಮಾಡಿಕೊಟ್ಟಿದ್ದು, ಆದ್ದರಿಂದ ಶಾಲಾ-ಕಾಲೇಜಿನ ಆಡಳಿತ ಮಂಡಳಿಯನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಈ ಆಡಳಿತ ಮಂಡಳಿಯ ನಿರ್ಲಕ್ಷದಿಂದ ಬಲಿಯಾಗಿರುವ ಇಬ್ಬರು ವಿದ್ಯಾರ್ಥಿಗಳ ಕುಟುಂಬಕ್ಕೆ ರಾಜ್ಯ ಸರಕಾರ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ದೇ ವೇಳೆ ಅವರು ಒತ್ತಾಯಿಸಿದರು.

300118_protest (3)

ಧರಣಿಯಲ್ಲಿ ಸಿಎಫ್ಐ ರಾಜ್ಯಾಧ್ಯಕ್ಷ ಮೊಹಮ್ಮದ್ ತಫ್ಸೀರ್,  ಸಿಎಫ್ಐ ಕಾರ್ಯದರ್ಶಿ ಫರಾಝ್, ರೋಸಾರಿಯೋ, ಬದ್ರಿಯಾ ಹಾಗೂ ಕೊಲಸೋ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

By suddi9

Leave a Reply

Your email address will not be published. Required fields are marked *