ಕುಡುಪು : ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಫೆ. 25ರಂದು `ಬ್ರಹ್ಮಕಲಶಾಭಿಷೇಕ’ ಜರುಗಲಿದ್ದು, ಆ ಪ್ರಯುಕ್ತ ದೇವಸ್ಥಾನಕ್ಕೆ ಜಿಲ್ಲೆಯ ಮೂಲೆಮೂಲೆಯಿಂದ ಹರಿದು ಬರಲಿರುವ ಹಸಿರು ಹೊರೆವಾಣಿ ಕಾಣಿಕೆ ಹಾಗೂ ಮೆರವಣಿಗೆ ಆಯೋಜನೆ ವಿಷಯದಲ್ಲಿ ಸೋಮವಾರ ದೇವಸ್ಥಾನದ ಶ್ರೀ ಸುಬ್ರಹ್ಮಣ್ಯ ಮಂದಿರದಲ್ಲಿ ವಿಶೇಷ ಸಭೆ ನಡೆಯಿತು.

ದೇವಸ್ಥಾನಕ್ಕೆ ಚೂಡಿದಾರ ಬೇಡ  ಸೀರೆಯಲ್ಲಿ ಬನ್ನಿ : ಕಡಂಬೋಡಿ29vp kudupu

“ಇಲ್ಲಿ ಈವರೆಗೆ ಬ್ರಹ್ಮಕಲಶೋತ್ಸವ ನಡೆದ ಬಗ್ಗೆ ಮಾಹಿತಿ ಇಲ್ಲ. ಇಲ್ಲಿನ ಈ ಸಂಭ್ರಮದಲ್ಲಿ ಜಾತಿ, ಮತ ಬೇಧದ ಅಡ್ಡ ಗೋಡೆ ಇರಬಾರದು. ಎಲ್ಲ ಜಾತಿಯವರು ಪಾಲ್ಗೊಳ್ಳುವಂತಾಗಬೇಕು ಮತ್ತು ನಾವೆಲ್ಲರೂ ಮನುಷ್ಯ ಜಾತಿಯವರೆಂಬುದು ಸಾಬೀತುಪಡಿಸಬೇಕು. ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮಹಿಳೆಯರು ಚೂಡಿದಾರದ ಬದಲಿಗೆ ಸೀರೆ ಉಟ್ಟುಕೊಳ್ಳಬೇಕು ಮತ್ತು ಯಾರೂ ಮಾದಕವಸ್ತು ಸೇವಿಸಬಾರದು” ಬ್ರಹ್ಮಕಲಶೋತ್ಸವ ಹೊರೆಕಾಣಿಕೆ ಸಮಿತಿ ಪ್ರಧಾನ ಸಂಚಾಲಕ ಮಹಾಬಲ ಪೂಜಾರಿ ಕಡಂಬೋಡಿ ಮನವಿ ಮಾಡಿದರು.30-kudupu 1

“ದೇವಸ್ಥಾನದಲ್ಲಿ ಕೆಲವು ವರ್ಷಗಳಿಂದ ಜೀರ್ಣೋದ್ಧಾರ ಕೆಲಸಗಳು ನಡೆಯುತ್ತ ಬಂದಿದೆ. ಮತ್ತೊಂದು ಹಂತದ ಜೀರ್ಣೋದ್ಧಾರ ನಡೆಸಲು ಸರ್ಕಾರದ ಮುಜರಾಯಿ ಇಲಾಖೆಗೆ ಪುನಾ ಹೊಸದಾಗಿ ಕಡತ ಪ್ರಕ್ರಿಯೆ ನಡೆಸಬೇಕಾಗಿದ್ದು, ನಾಲ್ಕು ವರ್ಷದ ಬಳಿಕ ಆ ಪ್ರಕ್ರಿಯೆಗೆ ಯಶಸ್ಸು ಲಭಿಸಿದೆ. ಅಂದರೆ, ದೇವರ ಇಚ್ಚೆಯಂತೆ ದೇವಸ್ಥಾನದ ಸುತ್ತುಪೌಳಿ ಜೀರ್ಣೋದ್ಧಾರಕ್ಕೆ ಅನುಮತಿ ಸಿಕ್ಕಿದೆ. ಸದ್ಯ ಈ ಕೆಲಸ ಪೂರ್ಣಗೊಳ್ಳುತ್ತ ಬಂದಿದ್ದು, ಫೆಬ್ರವರಿ 25ರಂದು ಬ್ರಹ್ಮಕಲಶೋತ್ಸವ ಜರುಗಲಿದೆ. ಇದರಲ್ಲಿ ಸದ್ಭಕ್ತರೆಲ್ಲರೂ ಕೈಜೋಡಿಸಬೇಕು” ಎಂದು ಕುಡುಪು ದೇವಸ್ಥಾನದ ತಂತ್ರಿ ಕೃಷ್ಣರಾಜ್ ವಿನಂತಿಸಿದರು.ಮೆರವಣಿಗೆಯಲ್ಲಿ ನೂರಾರು ಸಂಖ್ಯೆಯ ಕಲಶ ಹಿಡಿದ ಮಹಿಳೆಯರು ಪಾಲ್ಗೊಳ್ಳುವಂತೆ ಮನವಿ ಮಾಡಲಾಯಿತು.30 kudupu

ದೇವಸ್ಥಾನ ವ್ಯಾಪ್ತಿ ಪ್ರದೇಶದ ಪ್ರತಿಯೊಂದು ಮನೆಯಿಂದ ದೇಣಿಗೆ ಪಡೆಯಲು ಹಾಗೂ ಮೆರವಣಿಗೆಯಲ್ಲಿ ಕಡ್ಡಾಯ ಪಾಲ್ಗೊಳ್ಳುವಲ್ಲಿ ಸದಸ್ಯರು ಮನವಿ ಮಾಡಬೇಕು. ಅತಿ ಶ್ರದ್ಧಾಭಕ್ತಿ ಹಾಗೂ ಅದ್ದೂರಿಯಿಂದ ಹೊರೆವಾಣಿ ಕಾಣಿಕೆ ಮೆರವಣಿಗೆ ನಡೆಸುವ ಬಗ್ಗೆ ಸರ್ವರ ಸಹಕಾರ ಅವಶ್ಯವೆಂದು ಸಮಿತಿಯ ಪದಾಧಿಕಾರಿಗಳಾದ ಶರಣ್ ಪಂಪ್ವೆಲ್ ಮತ್ತು ಸತ್ಯಜಿತ್ ಸುರತ್ಕಲ್ ಮನವಿ ಮಾಡಿದರು.30-6

30 kudupu 6

ವೇದಿಕೆಯಲ್ಲಿ ಕುಡುಪು ದೇವಸ್ಥಾನದ ತಂತ್ರಿ ಕೃಷ್ಣರಾಜ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಮನೋಹರ್ ಭಟ್, ಬ್ರಹ್ಮಕಲಶ ಹೊರೆವಾಣಿ ಕಾಣಿಕೆ ಸಮಿತಿ ಪ್ರಧಾನ ಸಂಚಾಲಕ ಮಹಾಬಲ ಪೂಜಾರಿ ಕಡಂಬೋಡಿ, ಹೊರೆವಾಣಿ ಸಮಿತಿ ಸಂಚಾಲಕ ಸತ್ಯಜಿತ್ ಸುರತ್ಕಲ್ , ಹೊರೆವಾಣಿ ಕಾಣಿಕೆ ಸಮಿತಿ ಪದಾಧಿಕಾರಿಗಳಾದ ಗಣೇಶ್ ಭಟ್(ಶರವು ದೇವಸ್ಥಾನ), ಕಂಕನಾಡಿ ಗರಡಿ ಶ್ರೀ ಬ್ರಹ್ಮ ಬೈದರ್ಕಳ, ಮಂಗಳೂರು ವಿಭಾಗದ ಸಂಚಾಲಕ ಶರಣ್ ಪಂಪ್ವೆಲ್, ಬ್ರಹ್ಮಕಲಶ ಸಮಿತಿ ಕಾರ್ಯದರ್ಶಿ ಸುಜನ್‍ದಾಸ್ ದೈವಸ್ಥಾನದ ಅಧ್ಯಕ್ಷ ಕೇಶವ ತಂಗಡಿಮಾರು ಮತ್ತು ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಸುತಗುಂಡಿ ಇದ್ದರು. ಪುಷ್ಪರಾಜ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.30 kudupu 2

ಸಭೆಯ ವಿವರ :30 kudupu 5

30 kudupu 4

30 kudupu 3

ದೇವಸ್ಥಾನಕ್ಕೆ ಮಂಗಳೂರು ನಗರ, ಸುರತ್ಕಲ್ ಮತ್ತು ವಾಮಂಜೂರು-ಮೂಡಬಿದ್ರೆ ಮೂರು ಕೇಂದ್ರಗಳಿಂದ ಕ್ರಮವಾಗಿ ಫೆ. 18, ಫೆ. 20 ಮತ್ತು ಫೆ. 22ರಂದು ಹೊರೆವಾಣಿ ಆಗಮಿಸಲಿದೆ. ಈ ಮೂರು ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶದಲ್ಲಿ ಹೊರೆವಾಣಿ ಕಾಣಿಕೆ ಸಂಗ್ರಹಕ್ಕೆ ಉಪ-ಕೇಂದ್ರ ರಚಿಸಲಾಯಿತು. ಮಂಗಳೂರು ನಗರ ವ್ಯಾಪ್ತಿಯಲ್ಲಿ ಎಂಟು ಉಪ-ಕೇಂದ್ರಗಳಲ್ಲಿ(ಶರವು, ಮಂಗಳಾದೇವಿ, ಕದ್ರಿ ದೇವಸ್ಥಾನ, ಗರಡಿ ಶ್ರೀ ಬ್ರಹ್ಮಬೈದರ್ಕಳ, ಜಯರಾಮ ಭಜನಾ ಮಂದಿರ ಯೆಯ್ಯಾಡಿ, ಸಾರ್ವಜನಿಕ ಗಣೇಶಕಟ್ಟೆ-ದುರ್ಗಾಕಟ್ಟೆ ಸಮಿತಿ ಪದವಿನಂಗಡಿ, ಸುಬ್ರಹ್ಮಣ್ಯ ಭಜನಾ ಮಂದಿರ ಕುಲಶೇಖರ ಮತ್ತು ಸುಬ್ರಹ್ಮಣ್ಯ ಭಜನಾ ಮಂಡಳಿ ನೀರುಮಾರ್ಗ) ಸಂಗ್ರಹವಾಗುವ ಹಸಿರು ಹೊರೆವಾಣಿ ಫೆ. 18ರಂದು ಪೂರ್ವಾಹ್ನ ಮಂಗಳೂರು ನೆಹರೂ ಮೈದಾನದಲ್ಲಿ ಜಮೆಯಾಗಿ, ಮಧ್ಯಾಹ್ನದ ಹೊತ್ತಿಗೆ ಕುಲಶೇಖರ ಚೌಕಿಯವರೆಗೆ ವಾಹನಗಳಲ್ಲಿ ಬಂದು, ಅಲ್ಲಿಂದ ಮುಂದಕ್ಕೆ ದೇವಸ್ಥಾನದವರೆಗೆ ಅತಿ ವಿಜೃಂಭಣೆಯಿಂದ ಪಾದಯಾತ್ರೆ-ಮೆರವಣಿಗೆ ಮೂಲಕ ದೇವಸ್ಥಾನದ ಉಗ್ರಾಣ ತಲುಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ವಾಹನಗಳ ಸಂಖ್ಯೆಯ ಬಗ್ಗೆ ಉಪ-ಕೇಂದ್ರಗಳ ಪದಾಧಿಕಾರಿಗಳು ಮಾಹಿತಿ ನೀಡಿದರು. ಮೆರವಣಿಗೆ ಅದ್ದೂರಿಗೊಳಿಸುವ ನಿಟ್ಟಿನಲ್ಲಿ ಚೆಂಡನಾದ, ವೇಷ, ಭಜನೆ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.

* ವೀಡಿಯೋ  ನೋಡಲು  ಇಲ್ಲಿ ಕ್ಲಿಕ್ ಮಾಡಿ .

By suddi9

Leave a Reply

Your email address will not be published. Required fields are marked *