ಗುರುಪುರ : ಗುರುಪುರ ಮೂಳೂರು ಗ್ರಾಮದ ಶ್ರೀ ಮುಂಡಿತ್ತಾಯ ದೈವಸ್ಥಾನದ ವಾರ್ಷಿಕ `ಬಂಡಿ ಜಾತ್ರೆ’ ಫೆ. 13ರಂದು ಜರುಗಲಿದ್ದು, ಆ ಪ್ರಯುಕ್ತ ಅನ್ನದಾನ ಹಾಗೂ ಇತರ ವ್ಯವಸ್ಥೆ ಕುರಿತು ಜ. 28ರಂದು ದೈವಸ್ಥಾನದಲ್ಲಿ ಪೂರ್ವಭಾವಿ ಸಭೆ ಜರುಗಿತು.28 vp gurupur

ಬಂಡಿಯಂದು ವಾಹನ ಪಾರ್ಕಿಂಗ್ ಮತ್ತು ಸಂತೆ ಆಯೋಜನೆಯಲ್ಲಿ ಅಲ್ಪಸ್ವಲ್ಪ ಬದಲಿಸಲು ಮತ್ತು ದೈವಸ್ಥಾನದ ಜೀರ್ಣೋದ್ಧಾರ ಕೆಲಸ ಆರಂಭಿಸಲು ದೃಢ ಸಂಕಲ್ಪ ಕೈಗೊಳ್ಳಲಾಯಿತು. ಅಲ್ಲದೆ ಬಂಡಿಗೆ ಮುಂಚೆ ದೈವದ ಖಡ್ಗಕ್ಕೆ `ಪ್ರಾಯಶ್ಚಿತ ವಿಧಿ’ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಗಡಿಕಾರ ದೋಣಿಂಜೆಗುತ್ತು ಪ್ರಮೋದ್ ಕುಮಾರ್ ರೈ, ಪಡ್ಡಾಯಿಲಚ್ಚಿಲ್ ಭಂಡಾರಮನೆ ದಾಮೋದರ ನಿಸರ್ಗ, ಚಂದ್ರಹಾಸ ಕಾವ, ಬೆಳ್ಳಿಬೆಟ್ಟುಗುತ್ತು ಪ್ರವೀಣ್ ಶೆಟ್ಟಿ, ಜಿ ಟಿ ವಾಸುದೇವ ಭಟ್, ದೋಣಿಂಜೆಗುತ್ತು ಸುಧಾಕರ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಕುಮಾರ್ ಶೆಟ್ಟಿ, ಡಾ. ರವಿರಾಜ ಶೆಟ್ಟಿ, ಸೀತಾರಾಮ ಪೂಜಾರಿ, ರೋಹಿತಾಶ್ವ ಭಂಡಾರಿ, ವಿಲಾಸ್ ಶೆಟ್ಟಿ, ಕಿಟ್ಟಣ್ಣ ರೈ, ಹರೀಶ್ ಶೆಟ್ಟಿ ಉಪ್ಪುಗೂಡು, ವಿಶ್ವನಾಥ ಶೆಟ್ಟಿ, ಸತ್ಯಾನಂದ ಶೆಟ್ಟಿ, ಉಮೇಶ್ ಮುಂಡ, ಕರುಣಾಕರ ಕುಕ್ಕದಕಟ್ಟೆ, ಮೋಹನ ಕುಕ್ಕುದಕಟ್ಟೆ, ರಾಜು ಶೆಟ್ಟಿ ದೋಣಿಂಜೆ, ಶ್ರೀಧರ ಪೂಜಾರಿ, ಪುರಂದರ ಮಲ್ಲಿ, ಪುರುಷೋತ್ತಮ ಮಲ್ಲಿ, ನಳಿನಿ ಶೆಟ್ಟಿ, ಗಿರಿಜಾ, ಸೇಸಮ್ಮ ಮೊದಲಾದವರು ಇದ್ದರು. ಸಭಿಕರನ್ನು ಸ್ವಾಗತಿಸಿ ಪ್ರಸ್ತಾವಿಸಿದ ಯಶವಂತ ಕೋಟ್ಯಾನ್ ವಂದಿಸಿದರು.

By suddi9

Leave a Reply

Your email address will not be published. Required fields are marked *