ಕಾಸರಗೋಡು: ಹಳೆ ಸೂರ್ಲುವಿನ ಮದ್ರಸ ಅಧ್ಯಾಪಕ ಮೊಹಮ್ಮದ್ ರಿಯಾಝ್ ಮೌಲವಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇಲ್ಲಿನ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ.
ಕೇಳುಗುಡ್ಡೆ ಅಯ್ಯಪ್ಪ ಭಜನಾ ಮಂದಿರ ಸಮೀಪದ ಅಜೇಶ್ ( 20) ನಿತಿನ್ ( 19) ಮತ್ತು ಅಖಿಲೇಶ್ ( 25) ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಪ್ರಮುಖ ಆರೋಪಿಗಳು.
2017ರ ಮಾ. 20 ರಂದು ಕೊಲೆ ರಿಯಾಝ್ ಕೊಲೆ ನಡೆದಿತ್ತು.
ಆರೋಪಿಗಳು ಕಣ್ಣೂರು ಸೆಂಟ್ರಲ್ ಜೈಲ್ ನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

