ದಿಲ್ಲಿ: ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಕ್ ಜತೆ ಭಾರತ ಕ್ರಿಕೆಟ್ ಸರಣಿ ನಡೆಸುವುದು ಅಸಾಧ್ಯ ಎಂದು ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಸೋಮವಾರ ಸಂಸದೀಯ ಸಲಹಾ ಸಮಿತಿ ಜತೆಗಿನ ವಿದೇಶಾಂಗ ವ್ಯವಹಾರಗಳ ಕುರಿತ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಪಾಕ್ ಭಯೋತ್ಪಾದನೆ ಕುಮ್ಮಕ್ಕು ನೀಡುತ್ತಿದ್ದು, ಹೀಗಾಗಿ ಇವರೊಂದಿಗೆ ಯಾವುದೇ ರೀತಿಯ ಸ್ನೇಹ ಸಂಬಂಧ ಮುಂದುವರಿಸಲು ಸಾಧ್ಯವಿಲ್ಲ ಎಂದು ತನ್ನ ನಿಲುವನ್ನು ಹೊರಹಾಕಿದರು.
ಮಾನವೀಯ ನೆಲೆಯಲ್ಲಿ ವಯಸ್ಸಾದ ಹಾಗೂ ಮಹಿಳೆ ಕೈದಿಗಳನ್ನು ಪಾಕಿಸ್ತಾನ ಬಿಡುಗಡೆ ಮಾಡಲು ಮುಂದಾಗಿದೆ ಎಂದು ಖಾರವಾಗಿ ನುಡಿದ ಅವರು, 2017ರಲ್ಲಿ ಪಾಕಿಸ್ತಾನ 800 ಸಲ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತ ಪಾಕ್ ಜತೆ ಕ್ರಿಕೆಟ್ ಸರಣಿ ಅನುಚಿತ ಎಂದು ಸ್ಪಷ್ಪಡಿಸಿದ್ದಾರೆ.

