ಕಾಸರಗೋಡು: ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಬದಿಯಡ್ಕ ಠಾಣಾ ವ್ಯಾಪ್ತಿಯ ಪೆರ್ಲ ಕಾಟುಕುಕ್ಕೆಯಲ್ಲಿ ಸೋಮವಾರ ನಡೆದಿದೆ.
ಬಲಮೂಲೆ ಮುಂಗ್ಲಿಕಾನದ ಮಹಾಲಿಂಗ (35) ಮೃತಪಟ್ಟವರೆಂದು ಎಂದು ಗುರುತಿಸಲಾಗಿದೆ.
ಮಹಾಲಿಂಗ ಅವರು ಮನೆಯಲ್ಲಿ ವಿಷ ಸೇವಿಸಿ ಚಿಂತಾ ಜನಕ ಸ್ಥಿತಿಯಲ್ಲಿದ್ದಾಗ ಮನೆಯವರು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರು ಈ ವೇಳೆ ಮೃತಪಟ್ಟಿದ್ದಾರೆ ಎಮದು ತಿಳಿದು ಬಂದಿದೆ.
ಘಟನೆಗೆ ಕಾರಣ ತಿಳಿದು ಬಂದಿಲ್ಲ.
ಈ ಬಗ್ಗೆ ಬದಿಯಡ್ಕ ಠಾಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

