ಗುರುಪುರ-ಕೈಕಂಬ: ರಕ್ತದಾನ ಮಾಡುವುದೆಂದರೆ ವ್ಯಕ್ತಿಯ ಜೀವ ಉಳಿಸುವುದು ಎಂದರ್ಥ ಎಂದು ರೋಸಾ ಮಿಸ್ತಿಕಾ ಪಿಯು ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಲೀಜಾ ತಿಳಿಸಿದ್ದಾರೆ.
ರವಿವಾರ ಇಲ್ಲಿನ ಗ್ಯಾಲಕ್ಸಿ ಹಾಲ್ ನಲ್ಲಿ ಪಿಎಫ್ ಐ ಕೈಂಕಬ ವಲಯ ಸಮಿತಿಯಿಂದ ‘ಜನಾರೋಗ್ಯವೇ ರಾಷ್ಟ್ರ ಶಕ್ತಿ’ ಎಂಬ ರಾಷ್ಟ್ರೀಯ ಅಭಿಯಾನದ ಅಂಗವಾಗಿ ಕೆಎಂಸಿ ಆಸ್ಪತ್ರೆ ಸಹಯೋಗದಿಂದ ಆಯೋಜಿಸಿದ್ದ ‘ಬೃಹತ್ ರಕ್ತದಾನ ಶಿಬಿರ’ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಕ್ತದಾನ ಶಿಬಿರ ಏರ್ಪಡಿಸುವುದರಿಂದ ಸಮಾಜದ ಆರೋಗ್ಯದ ಮೇಲೆ ನಮಗಿರುವ ಕಾಳಜಿಯನ್ನು ಇತರರಿಗೂ ತೋರಿಸುತ್ತದೆ ಎಂದವರು, ನಮ್ಮ ರಕ್ತದಲ್ಲಿ ಕಬ್ಬಿನಾಂಶ ಹೆಚ್ಚಿದಾಗ ದೇಹಕ್ಕೆ ಮಾರಕ ರೋಗಗಳು ಉಂಟಾಗುವ ಸಾಧ್ಯತೆಯಿದ್ದು, ರಕ್ತದಾನ ಮಾಡುವ ಮೂಲಕ ಇದರಿಂದ ಮುಕ್ತರಾಗಬಹುದು ಎಂದು ಅವರು ವಿವರಿಸಿದರು.
ಈ ವೇಳೆ 75 ಶಿಬಿರಾರ್ಥಿಗಳೊಂದಿಗೆ ಹಿಂದು ಸಹೋದರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಸೌಹಾರ್ದತೆಗೆ ಸಾಕ್ಷಿಯಾದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಪಿಎಫ್ಐ ಮೂಡಬಿದ್ರೆ ಡಿವಿಶನ್ ಅಧ್ಯಕ್ಷ ಅಬೂಬಕ್ಕರ್ ವಾಮಂಜೂರು, ಕರಿಯಂಗಳ ಗ್ರಾ.ಪಂ.ಸದಸ್ಯ ನವಾಝ್ ಬಡಕಬೈಲ್, ಡಾ. ಶಾಝಿಮಾ ಮಾತನಾಡಿದರು. ಪಿಎಫ್ಐ ಮೂಡಬಿದ್ರೆ ಡಿವಿಶನ್ ಕಾರ್ಯದರ್ಶಿ ಸಿ.ಟಿ. ಇಬ್ರಾಹೀಂ, ಎಸ್ ಡಿಪಿಐ ವಲಯಾಧ್ಯಕ್ಷ ಅಬ್ದುಲ್ ಖಾದರ್, ಪಿಎಫ್ ಐ ವಲಯಾಧ್ಯಕ್ಷ ರೆಹ್ಮಾನ್ ಎಡಪದವು, ಗುರುಕಂಬಳ ಜಾಮೀಯಾ ಮಸ್ಜಿದ್ ಖತೀಬ್ ಹಾಫಿಝ್ ಶೇಖ್ ಮೊಹಮ್ಮದ್ ಫಿರೋಝ್ ಮತ್ತಿತರರು ಉಪಸ್ಥಿ ತರಿದ್ದರು.
ಅಬ್ದುಲ್ ರಝಾಕ್ ಕೈಕಂಬ ಸ್ವಾಗತಿಸಿದರು. ಅಸ್ಲಾಂ ಎಡಪದವು ಕಾರ್ಯಕ್ರಮವನ್ನು ನಿರೂಪಿಸಿದರು.



