ನಾರ್ಲ ಪದವು: ಇಲ್ಲಿನ ಆಳ್ವಾಸ್ ಕ್ರೀಡಾಂಗಣದಲ್ಲಿ ಎನ್ಎಫ್ ಸಿ ಕ್ರಿಕೆಟ್ ತಂಡದ ವತಿಯಿಂದ ಆಯೋಜಿಸಿದ್ದ “ನೂಯಿ ಪ್ರೀಮಿಯರ್ ಲೀಗ್ ” ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ಟ್ರೈಕರ್ಸ್ ಬಂಗಳಗುಡ್ಡೆ ಪ್ರಥಮ ಸ್ಥಾನ, ಅಡ್ಡೂರು ಬುಲ್ಸ್ ದ್ವಿತೀಯ ಸ್ಥಾನ ಪಡೆದು ಜಯದ ಪತಾಕೆ ಹಾರಿಸಿದೆ.
ಸೋಮವಾರ ನಡೆದ ಸ್ಟ್ರೈಕರ್ಸ್ ಬಂಗಳಗುಡ್ಡೆ ಹಾಗೂ ಅಡ್ಡೂರು ಬುಲ್ಸ್ ತಂಡದ ನಡುವೆ ನಡೆದ ಜಿದ್ದಾ ಜಿದ್ದಿನ ಪಂದ್ಯದ ಹೋರಾಟದಲ್ಲಿ, ಅಡ್ಡೂರು ಬುಲ್ಸ್ 6 ಓವರ್ ಗಳಲ್ಲಿ 37 ರನ್ ಗಳಿಸಿ, 38 ರನ್ ಪಡೆಯಲು ಸ್ಟ್ರೈಕರ್ಸ್ ಬಂಗಳಗುಡ್ಡೆ ತಂಡಕ್ಕೆ ಸವಾಲೆಸಗಿತು. ಕೊನೆಗೂ ಪ್ರಥಮ ಸ್ಥಾನ ಕಬಳಿಸುವಲ್ಲಿ ಸ್ಟ್ರೈಕರ್ಸ್ ಬಂಗಳಗುಡ್ಡೆ ಯಶಸ್ವಿಯ ಗುರಿ ಮುಟ್ಟಿತು.
ಪಂದ್ಯದಲ್ಲಿ ವಿಜೇತಗೊಂಡ ಸ್ಟ್ರೈಕರ್ಸ್ ಬಂಗಳಗುಡ್ಡೆ ತಂಡ 60,000 ನಗದು, ವಿನ್ನರ್ಸ್ ಎನ್ ಪಿಎಲ್ ಟ್ರೋಫಿ ಪಡೆದರೆ, ಅಡ್ಡೂರು ಬುಲ್ಸ್ 40,00 ನಗದು ಹಾಗೂ ರನ್ನರ್ಸ್ ಎನ್ ಪಿಎಲ್ ಟ್ರೋಫಿ ಪಡೆಯು ಮೂಲಕ ಪಂದ್ಯಾವಳಿ ಸಮಾಪ್ತಿಗೊಂಡಿತು.
ಈ ವೇಳೆ ಪಂದ್ಯ ಶ್ರೇಷ್ಠನಾಗಿ ಸ್ಟ್ರೈಕರ್ಸ್ ಬಂಗಳಗುಡ್ಡೆ ತಂಡದ ಇಚೂ, ಉತ್ತಮ ಎಸೆತಗಾರನಾಗಿ ಸ್ಟ್ರೈಕರ್ಸ್ ಬಂಗಳಗುಡ್ಡೆ ತಂಡದ ಸಿನಾನ್, ಉತ್ತಮ ಹೊಡೆತಗಾರನಾಗಿ ಸ್ಟ್ರೈಕರ್ಸ್ ಬಂಗಳಗುಡ್ಡೆ ತಂಡದ ಯೂಸೂಫ್ ಹಾಗೂ ಸರಣಿ ಶ್ರೇಷ್ಠನಾಗಿ ಅಡ್ಡೂರು ಬುಲ್ಸ್ ತಂಡದ ಅಲ್ತಾಫ್ ಅವರು ಹೊರಹೊಮ್ಮುವ ಮೂಲಕ “ನೂಯಿ ಪ್ರೀಮಿಯರ್ ಲೀಗ್” ಕೊಡ ಮಾಡುವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಎದುರಾಳಿ ತಂಡಕ್ಕೆ ನಡುಕ ಹುಟ್ಟಿಸುವ ‘ಅಡ್ಡೂರು ಬುಲ್ಸ್’: ಹೌದು, ಜಿಲ್ಲೆಯ ದಕ್ಷಿಣ ಭಾಗದಲ್ಲಿ ನಡೆಯುವ ಎಲ್ಲಾ ಕ್ರಿಕೆಟ್ ಪಂದ್ಯಾವಳಿಯಲ್ಲಿ “ಫೈವ್ ಸ್ಟಾರ್ ಅಡ್ಡೂರು” ತಂಡ ತನ್ನ ಉತ್ತಮ ಆಟದ ಪ್ರದರ್ಶನದಿಂದ ಖ್ಯಾತಿ ಪಡೆದಿದ್ದು, ಇದರ ಮುಂದುವರಿದ ಭಾಗವಾಗಿ ಯು.ಪಿ.ಇಬ್ರಾಹೀಂ ನೇತೃತ್ವದ “ಅಡ್ಡೂರ್ ಬುಲ್ಸ್” ಇದೀಗ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗುರುತಿಸಿಕೊಂಡು ತನ್ನ ತಂಡದ ಆಟಗಾರರ ಚಾತುರ್ಯದಿಂದ ಎದುರಾಳಿ ತಂಡಕ್ಕೆ ಭಯದ ನಡುಕ ಹುಟ್ಟಿಸಿ ಜಯಗಲಿಸಿದ ಅದೆಷ್ಟೋ ನಿದರ್ಶನಗಳನ್ನು ನಾವು ಕಂಡಿದ್ದೇವೆ.
ಇನ್ನೂ ಈ ತಂಡದ ಸ್ಪಿನ್ನರ್ ಎಸತಗಾರಿಕೆಯಲ್ಲಿ ಹಕೀಂ, ಶಾಫೀ, ಉತ್ತಮ ಹೊಡೆತಗಾರರಲ್ಲಿ ಆಸೀಫ್, ಅಲ್ತಾಫ್, ಇಂಮ್ತಿಯಾಝ್ ಹಾಗೂ ನೌಫಲ್ ಮತ್ತಿತರಿದ್ದು, ಇನ್ನಷ್ಟು ತಂಡವನ್ನು ಬಲಿಷ್ಠಗೊಳಿಸುವಲ್ಲಿ ಸಫಲತೆ ಕಂಡಿದ್ದಾರೆ.
ಕಳೆದ ಇದೇ ನಾರ್ಲ ಪದವಿನಲ್ಲಿ ನಡೆದ ಲೀಗ್ ಪಂದ್ಯಾವಳಿಯಲ್ಲಿ ವಿಜಯದ ಪತಾಕೆ ಹಾರಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಜನಮನದಲ್ಲಿ “ಅಡ್ಡೂರ್ ಬುಲ್ಸ್” ತಂಡ ಅಚ್ಚೊತ್ತಿ ನಿಂತಿದ್ದನ್ನು ನಾವು ಇಂದಿಲ್ಲಿ ನೆನಪಿಸಿಕೊಳ್ಳಬಹುದು.






