ಚೆನ್ನೈ: ತಾನು ರಾಜಕೀಯಕ್ಕೆ ಪ್ರವೇಶಿಸಬೇಕೇ, ಬೇಡವೇ ಎಂಬ ಸ್ಪಷ್ಟ ನಿಲುವನ್ನು ಡಿ.31 ರಂದು ಪ್ರಕಟಿಸಲಿದ್ದೇನೆ ಎಂದು ತಮಿಳು ನಟ ಸೂಪರ್ ಸ್ಟಾರ್ ರಜನಿ ಕಾಂತ್ ಇಂದಿಲ್ಲಿ ಮಾಹಿತಿ ನೀಡಿದ್ದಾರೆ.
ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಇಂದಿನಿಂದ ಆರು ದಿನಗಳ ಕಾಲ ರಜನಿ ತಮ್ಮ ಅಭಿಮಾನಿಗಳನ್ನು ಭೇಟಿ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಅವರು ಮಾತನಾಡಿದರು.
1990ರಿಂದಲೂ ರಾಜಕೀಯದ ಆಗು-ಹೋಗುಗಳ ಬಗ್ಗೆ ನಾನು ಹತ್ತಿರದಿಂದ ಗಮನಿಸುತ್ತಾ ಬಂದಿದ್ದು, ರಾಜಕೀಯಕ್ಕೆ ನಾನೇನು ಹೊಸಬನಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ರಾಜಕೀಯಕ್ಕೆ ಕಾಲಿಡುವುದರ ಬಗ್ಗೆ ಎಲ್ಲರಲ್ಲೂ ಗೊಂದಲ ಉಂಟುಮಾಡಿದೆ. ಆದ್ದರಿಂದ ಡಿ.31ರಂದು ಕೂಲಂಕುಷವಾಗಿ ವಿಮರ್ಶಿಸಿ ನಿರ್ಧಾರ ಘೊಷಿಸುತ್ತೇನೆ ಎಂದು ಹೇಳಿದರು.

