ದಿಲ್ಲಿ: ಸಾಮಾಜಿಕ ಜಾಲತಾಣಗಳಲ್ಲಿ ಫೇಸ್ ಬುಕ್ ನೊಂದಿಗೆ ಸರಿ ಸಮನಾಗಿ ಪೈಪೋಟಿಗೆ ನಿಂತು ತನ್ನ ಬಳಕೆದಾರರಿಗೆ ಹೊಸ ವಿನ್ಯಾಸ ರೂಪದ ಪ್ಯೋಚರ್ ಒದಗಿಸಿಕೊಟ್ಟ ‘ವಾಟ್ಸ್ ಆ್ಯಪ್’ ಇದೀಗ ಹೊಸ ವಿವಾದದ ಸುಳಿಗೆ ತುತ್ತಾಗಿದೆ.
ವಾಟ್ಸ್ ಆ್ಯಪ್ ನಲ್ಲಿ ವಿವಿಧ ರೀತಿಯ ಫ್ಯೂಚರ್ ಗಳಿದ್ದು, ಅದರಲ್ಲಿಯೂ ಇಮೋಜಿಗಳು ಕೂಡ ಒಂದು. ಇದೇ ಇಮೋಜಿಗಳಿಂದ ವಾಟ್ಸ್ ಆ್ಯಪ್ ನ ಪ್ರತಿಷ್ಠೆಗೆ ಧಕ್ಕೆ ಒದಗಿ ಬಂದಿದೆ ಎಂದರೆ ಎಲ್ಲರಲ್ಲೂ ಅಚ್ಚರಿ ಮೂಡುವುದರಲ್ಲಿ ಸಂಶಯವಿಲ್ಲ.
ಏನಿದು ಘಟನೆ: ವಾಟ್ಸ್ ಆ್ಯಪ್ ನ ಇಮೋಜಿಗಳಲ್ಲಿ ನಾನಾ ವಿದಧ ಸಂಕೇತಗಳಿದ್ದು, ಅದರಲ್ಲಿ ಮಧ್ಯಬೆರಳಿನ ಇಮೋಜಿಯನ್ನು 15 ದಿನಗಳವರೆಗೆ ತೆಗೆದು ಹಾಕಬೇಕು ಇಲ್ಲದಿದ್ದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ವಕೀಲೋರ್ವರು ವಾಟ್ಸ್ ಆ್ಯಪ್ ಗೆ ಕಾನೂನು ನೋಟಿಸನ್ನು ಜಾರಿಗೊಳಿಸಿದ ಘಟನೆ ಇದೀಗ ಬೆಳಕಿಗೆ ಬಂದಿದೆ.
ನಗರ ನ್ಯಾಯಾಲಯದಲ್ಲಿ ವಕೀಲರಾಗಿ ಕಾರ್ಯನಿರ್ಹಿಸುತ್ತಿರುವ ಗುರ್ಮಿತ್ ಸಿಂಗ್ ನೋಟೀಸ್ ಜಾರಿಗೊಳಿಸಿದವರಾಗಿದ್ದು, ವಾಟ್ಸ್ ಆ್ಯಪ್ ನಲ್ಲಿ ಮಧ್ಯಬೆರಳಿನ ಇಮೋಜಿ ಅಶ್ಲೀಲ ಹಾಗೂ ತುಚ್ಛ ಭಂಗಿಯಾಗಿದೆ. ಅಲ್ಲದೆ, ಮಧ್ಯೆಬೆರಳನ್ನು ತೋರಿಸುವುದು ನಮ್ಮ ದೇಶದಲ್ಲಿ ಅಪರಾಧವಾಗಿದೆ ಎಂದು ಅವರು ಹೇಳಿದ್ದಾರೆ.
“ನಿಮ್ಮ ಆ್ಯಪ್ ಮಧ್ಯಬೆರಳಿನ ಇಮೋಜಿಯನ್ನು ಬಳಸುವಂತೆ ಉತ್ತೇಜಿಸುವುದು ಅಪರಧಾರ. ಆದ್ದರಿಂದ ಮಧ್ಯೆಬೆರಳಿನ ಇಮೋಜಿ ಅಥವಾ ಪೋಟೊವನ್ನು ಈ ಕಾನೂನು ನೋಟೀಸ್ ದೊರಕಿದ 15 ದಿನಗಳಲ್ಲಿ ತೆಗೆದು ಹಾಕಬೇಕು. ಇಲ್ಲದಿದ್ದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು” ಎಂದು ನೋಟೀಸ್ ನಲ್ಲಿ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.


