01 (1)

ಗುರುಪುರ: ಪ್ರಶಾಂತ್ ಗುರುಪುರ ಸಾರಥ್ಯದ ಗುರುದಯ ತಂಡಸ ರಂಗ್‍ದ ಕಲಾವಿದರು ತುಳು ರಂಗ ಭೂಮಿಯಲ್ಲಿ ಮೊದಲ ಪ್ರಯೋಗದಲ್ಲೇ ಜನಮನ ಗೆದ್ದು ಹಾಸ್ಯದ ನಗೆ ಕಡಲಲ್ಲಿ ತೇಲಿಸಿದ ಈ ವರ್ಷದ ಸೂಪರ್ ಹಿಟ್ ಹಾಸ್ಯಭರಿತ ಸಮಾಜಕ್ಕೆ ಸಂದೇಶ ಸಾರುವ ನಾಟಕ “ದಾಯೆ ಬದ್ಕೆರಾಪುಜಿ” ರಂಗ ಸವ್ಯಸಾಚಿ ಎಲ್, ಕಿಶೋರ್ ಡಿ.ಶೆಟ್ಟಿ ಹಾಗೂ ಕಲಾ ಸಾಮ್ರಾಟ್ ನವೀನ್ ಶೆಟ್ಟಿ ಅಳಕೆಯವರ ಮಾರ್ಗದರ್ಶನದೊಂದಿಗೆ ಅಭಿನಯ ಶಾರದೆ ಶೋಭಾ ಶೆಟ್ಟಿ ಶಕ್ತಿನಗರ ಸಹಕಾರದಲ್ಲಿ ಪ್ರಭುದ್ದ ಕಲಾವಿದರು ಜೊತೆಗೂಡಿ ಯಶಸ್ವಿಯಾಗಿ ಜನರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುವಲ್ಲಿ ಸಫಲರಾದ ಈ ತಂಡ ಹಾಗೇಯೆ ಮಹಾನ್ ಕಲಾವಿದರಿಂದ ಪ್ರಶಂಸೆ ಗಿಟ್ಟಿಸಿಕೊಂಡಿದೆ.

02

ತುಳುನಾಡಿನಲ್ಲಿ ಹಲವಾರು ಪ್ರದರ್ಶನಗಳನ್ನು ನೀಡಿದ್ದ ರಂಗ್‍ದ ಕಲಾವಿದರು ತುಳುರಂಗಭೂಮಿಯಲ್ಲಿ ಹೊಸ ಹೊಸ ಇತಿಹಾಸವನ್ನು ಬರೆದು ಈ ತಂಡವು ಮಾಯಾನಗರಿಯೆಂದೆ ಖ್ಯಾತಿ ಪಡೆದ ಮುಂಬೈ ನಗರಕ್ಕೆ ಪ್ರವಾಸ ಕೈಗೊಂಡು ಸತೀಶ್ ಮುಂಡ್ಕೂರು ಮತ್ತು ಹರೀಶ್ ಪಡು ಇವರ ನೇತೃತ್ವದಲ್ಲಿ ನವೀನ್ ಪಡ್ಪು, ಪ್ರಭಾಕರ ಬೆಳುವಾಯಿ, ಸತೀಶ್ ಎರ್ಮಲ್ ಇವರ ಸಹಕಾರದಲ್ಲಿ ಡಿ.16ರಂದು ಬಿಲ್ಲವರ ಭವನ ಸಂತ ಕ್ರೂಜ್ ಪೂರ್ವದಲ್ಲಿ ಯಶಸ್ವಿ ಪ್ರದರ್ಶನ ಕಂಡು ಮುಂಬೈ ಕಲಾಭಿಮಾನಿಗಳನ್ನು ರಂಜಿಸಿ ಮುಂಬೈ ಜನತೆಯ ಜನಮನ ಗೆದ್ದಿತು.

By Suddi9

Leave a Reply

Your email address will not be published. Required fields are marked *