ಪೊಳಲಿ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜಸ್ಥಿದರ ಆಶ್ರಯದಲ್ಲಿ ಮನೋರೋಗ ಚಿಕಿತ್ಸಾ ವಿಭಾಗ, ಜ.ಕೆ.ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಇವರಿಂದ ಮಾನಸಿಕ ಆರೋಗ್ಯದ ಬಗ್ಗೆ ಮಾಹಿತಿ ಮತ್ತು ಮುಕ್ತ ಸಂವಾದ ಕಾರ್ಯಕ್ರಮವು ಭಾನುವಾರ ರಾಮಕೃಷ್ಣ ತಪೋವನದಲ್ಲಿ ಜರುಗಲಿದೆ.
ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಉದ್ಘಾಟನೆಯನ್ನು ಮಾಡಲಿದ್ದಾರೆ. ದೇರಳಕಟ್ಟೆ ಆಸ್ಪತ್ರೆಯ ಮನೋರೋಗ ತಜ್ಙರಾದ ಡಾ.ಶಿಶಿರ್ ಮಾಹಿತಿ ನೀಡಲಿದ್ದಾರೆ. ದೇರಳಕಟ್ಟೆ ಆಸ್ಪತ್ರೆಯ ಜ.ಕೆ.ಎಸ್ ಹೆಗ್ಡೆ ಮನೋರೋಗದ ಚಿಕಿತ್ಸಾ ವಿಭಾಗದ ಸುಮನ್ ,ಮುಖ್ಯ ಅತಿಥಿ ಗಳಾಗಿ ಬಂಟ್ವಾಳ ಜನಜಾಗೃತಿ ವೇದಿಕೆಯ ಪ್ರಕಾಶ್ ಕಾರಂತ ನರಿಕೊಂಬು, ಧರ್ಮಸ್ಥಳ ಗ್ರಾ.ಯೋಜನಾಧಿಕಾರಿ ಸುನೀತಾ ನಾಯಕ್ ಭಾಗವಹಿಸಲಿದ್ದಾರೆ.
