ಕೈಕಂಬ: ಅಡ್ಡೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ (ರಿ)ಇದರ ವತಿಯಿಂದ 40ನೇ ವರ್ಷದಲ್ಲಿ ಆಚರಿಸಲ್ಪಡುವ ಶ್ರೀ ಗಣೇಶನಿಗೆ ಬೆಳ್ಳಿಯ ಪ್ರಭಾವಳಿ ಸಮರ್ಪಿಸಲು ನಿರ್ಧರಿಸಲಾಗಿದೆ..

ಶ್ರೀ ಗಣೇಶ ದೇವರಿಗೆ ಸಮರ್ಪಿಸಲಾಗುವ ಬೆಳ್ಳಿಯ ಪ್ರಭಾವಳಿಗೆ ಸಂಬಂಧಿಸಿದ ವಿಜ್ಞಾಪನ ಪತ್ರವನ್ನು ಜೂ.21ರಂದು ಭಾನುವಾರ ಅಡ್ಡೂರು ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು. 

ವಿಜ್ಞಾಪನಪತ್ರವನ್ನು ಉದ್ಯಮಿ ಚಂದ್ರಹಾಸ ಶೆಟ್ಟಿ ನಾರಳ ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ರವಿಶಂಕರ್ ರಾವ್ ನೂಯಿ, ವಿಶ್ವೇಶ್ವರ ಭಟ್ ಕಾಂಜಿಲಕೋಡಿ, ಹಾಗೂ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಯಶೋಧರ ಅಡ್ಡೂರು  ಹಾಗೂ ಸಮಿತಿಯ ಪದಾಧಿಕಾರಿಗಳು ಹಾಗೂ ಊರ–ಪರವೂರ ಭಕ್ತರು ಉಪಸ್ಥಿತರಿದ್ದರು.

ನಂತರ ನಡೆದ ಸಮಿತಿಯ ಮಹಾಸಭೆಯಲ್ಲಿ ಇತ್ತೀಚೆಗೆ ನಿಧನರಾದ ಸುಳ್ಯಗುತ್ತು ಸುಬ್ಬಯ್ಯ ಭಂಡಾರಿ ಅವರಿಗೆ ಸಂತಾಪ ಸೂಚಿಸಲಾಯಿತು.

ಈ ಸಂದರ್ಭದಲ್ಲಿ  ಸಾರ್ವಜನಿಕ ಶ್ರೀ ಗಣೇಶೋತ್ಸವ  ಸಮಿತಿಯ   ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಭಾಗವಹಿಸಿ  ಸಲಹೆ-ಸೂಚನೆಗಳನ್ನು ನೀಡಿ 40ನೇ ವರ್ಷದ ಗಣೇಶೋತ್ಸವವು ಯಶಸ್ವಿಯಾಗಿ ನೆರವೇರಲು ಸಹಕರಿಸುವುದಾಗಿ ಮಹಾಸಭೆಯಲ್ಲಿ ತಿಳಿಸಿದರು.  ನವೀನ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *