ವಾಮಂಜೂರು : ತಿರುವೈಲ್ ಗುತ್ತು  ಸಂಕುಪೂಂಜ ದೇವುಪೂಂಜ ಕಂಬಳ ಸಮಿತಿಯ  ಗೌರವಾಧ್ಯಕ್ಷ ಹಾಗೂ ಗುರುಪುರ ಬಂಟರ ಮಾತೃ ಸಂಘದ ಸ್ಥಾಪಕ ಸದಸ್ಯರಾದ ವಾಮಂಜೂರುನಲ್ಲಿ ಕೊಡುಗೈದಾನಿಯಾಗಿ ಜನಪ್ರಿಯರಾಗಿದ್ದ ಯಕ್ಷಗಾನ ಹಾಗೂ ಕಂಬಳ ಪ್ರೇಮಿ ಲಿಂಗುಮಾರು ಶಿವಣ್ಣ ಶೆಟ್ಟಿ(85) ಅ. 8ರಂದು ಮಧ್ಯಾಹ್ನ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನ ಹೊಂದಿದರು.9vp lingumaru sivanna shetty

ಇವರು ಇಬ್ಬರು ಪುತ್ರಿ, ಒಬ್ಬ ಪುತ್ರ ಹಾಗೂ ಅಪಾರ ಬಂಧುಗಳು-ಅಭಿಮಾನಿಗಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಅನೇಕ ಗಣ್ಯರು ಶೋಕ ವ್ಯಕ್ತಪಡಿಸಿದರು. ಪುತ್ರ ತಿರುವೈಲುಗುತ್ತು ರಾಜಕುಮಾರ್ ಶೆಟ್ಟಿ ಗುರುಪುರ ಬಂಟರ ಮಾತೃ ಸಂಘದ ಅಧ್ಯಕ್ಷರಾಗಿದ್ದಾರೆ.   50  ವರ್ಷ ಕಟೀಲು ಮೇಳದ ಯಕ್ಷಗಾನವನ್ನು ಆಡಿಸಿ ಕಳೆದ ವರ್ಷ ಸುವರ್ಣ ಸಭ್ರಮ ಆಚರಣೆ ನಡೆಸಿದ್ದು  ಕಲಾವಿದರಿಗೆ ಭವ್ಯ ಸನ್ಮಾನ ಏರ್ಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

By suddi9

Leave a Reply

Your email address will not be published. Required fields are marked *