ಪೊಳಲಿ: ರಾಜಶ್ರೀ ಯುವ ಫ಼ೆಂಡ್ಸ್ ಪೊಳಲಿ ಕಿನ್ನಿಗುಡ್ದೆ ಇದರ ವತಿಯಿಂದ ತಾಸೆ ಮೋಹನ್ ದೇವಾಡಿಗ ಅವರನ್ನು ದಸರಾ ಮಾಹೋತ್ಸವದ ಸಂದರ್ಭ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಸಭಾಂಗಣದಲ್ಲಿ ಸನ್ಮಾನಿಸಲಾಯಿತು. ಹಲಾವಾರು ವರ್ಷಗಳಿಂದ ನವರಾತ್ರಿಯ ಸಂದರ್ಭದಲ್ಲಿ ತಾಸೆಯ ಬಡಿತದಿಂದ ಕುಣಿಯುವ ಹುಲಿವೇಷದಾರರಿಗೆ ಉತ್ಸಾಹಭರಿತರಾಗಿ ತಾಸೆಯನ್ನು ಭಾರಿಸಿ ತಾಸೆ ಮೋಹನನ್ನ ಎಂದೇ ಪೊಳಲಿ ಪರಿಸರದಲ್ಲಿ ಪ್ರಖ್ಯಾತಿ ಪಡೆದ ಅವರನ್ನು ರಾಜಶ್ರೀ ಯುವ ಫ್ರೆಂಡ್ಸ್ ಪರವಾಗಿ ತಾ.ಪಂ.ಸದಸ್ಯ ಯಶವಂತಪೂಜಾರಿ, ಗ್ರಾ.ಪಂ.ಸದಸ್ಯ ಲೋಕೇಶ್ ಭರಣಿ ಹಾಗೂ ರಾಜಶ್ರೀ ಯುವ ಫ್ರೆಂಡ್ಸ್ ಇದರ ಸದಸ್ಯರು ಉಪಸ್ಥಿತರಿದ್ದರು.


