ಪೊಳಲಿ:ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿಯಲ್ಲಿ ನವೆಂಬರ್ 24 ರಂದು ರಾತ್ರಿ ಅಪ್ಪದಪೂಜೆ ಜರಗಲಿದೆ.

ಅಪ್ಪದಪೂಜೆ ರಶೀದಿಯನ್ನು ಸೇವಾ ಕೌಂಟರ್ನಲ್ಲಿ ನೀಡಲಾಗುವುದು. ಅಪ್ಪದ ಪೂಜೆಯ ರಶೀದಿಯನ್ನು ಕಡ್ಡಾಯವಾಗಿ ದಿನಾಂಕ: 24-11-2026ನೇ ಮಂಗಳವಾರದಂದು ರಾತ್ರಿ ಗಂಟೆ 8.30 ರ ಒಳಗೆ ಪಡೆಯತಕ್ಕದ್ದು
ಅಪ್ಪದ ಪೂಜೆ ಒಂದರ ರೂ 70 ರಂತೆ ರಶೀದಿ ಮಾಡಬೇಕಾಗಿ ವಿನಂತಿಸಲಾಗಿದೆ.
ನ.24ರಂದು ಬೆಳಗ್ಗಿನಿಂದ ಮರುದಿನ ನ.25 ರ ಬೆಳಗಿನವರೇಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆಯು ನಡೆಯಲಿದೆ ಎಂದು ಆಡಳಿತ ಮಂಡಳಿಯ ಪ್ರಕಟನೆ ತಿಳಿಸಿದೆ.
