ಸುದ್ದಿ9ಪೊಳಲಿ:ರಾಜಶ್ರೀ ಯುವಕ ಮಂಡಲ(ರಿ)ಪೊಳಲಿ ಮತ್ತು ರಾಜೇಶ್ವರೀ ಮಹೀಳಾ ಮಂಡಳಿ(ರಿ)ಪೊಳಲಿ ಇವರ ಸಹಯೋಗದೊಂದಿಗೆ 4ನೇ ವರ್ಷದ “ಆಟಿಡ್ ಕೇಸರ್ಡೊಂಜಿ ದಿನ” ಕಾರ್ಯಕ್ರಮವು ದಿ.10-08-2014 ಆದಿತ್ಯವಾರ ಬೆಳಗ್ಗೆಯಿಂದ ಸಂಜೆವರೆಗೂ ಬಡಕಬೈಲ್ ದಿ.ಮಂಜಯ್ಯ ಚೌಟರ ಮನೆ ವಠಾರದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕೃಷಿಕರು ಗಂಪ ವಾಮನ ಪೂಜಾರಿ ಮಾಡಲಿದ್ದಾರೆ. ರಾಮಕೃಷ್ಣ ತಪೋವನ ಮತ್ತು ರಾಜಶ್ರೀ ಯುವಕ ಮಂಡಲ ಪೊಳಲಿ ಇದರ ಗೌರವಧ್ಯಕ್ಷರು ವಿವೇಕಚೈತನ್ಯಾನಂದ ಸ್ವಾಮೀಜಿ ಹಾಗೂ ಮಲ್ಲಿಕಾ ಎಂ.ಚೌಟ ಬಡಕಬೈಲ್ ಆಶರ್ಿವಚನ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ರಾಜೇಶ್ ನಾಕ್ ವಹಿಸಲಿದ್ದಾರೆ. ಮುಖ್ಯ ಬಾಷಣವನ್ನು ಕೆ. ಮಹೇಂದ್ರನಾಥ ಸಾಲೆತ್ತೂರು, ಮಾಡಲಿರುವರು. ಮುಖ್ಯ ಅಥಿತಿಗಳಾಗಿ ಯುವ ಉದ್ಯಮಿ ಕಿನ್ಯ, ಕುಡ್ಲ ಸೋಮಶೇಖರ್ ಶೆಟ್ಟಿ, ತುಳು ಸಿನಿಮಾ, ನಾಟಕ ಕಲಾವಿದರು ಭೋಜರಾಜ್ ವಾಮಂಜೂರು ಭಾಗವಹಿಸಲಿದ್ದಾರೆ.
